ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್‌ಲೈನ್‌ನಲ್ಲೇ ಲಭ್ಯ!

10/06/2026 5:28 PM Total Views: 119893

Gouse Dafedar

 ಇನ್ಮುಂದೆ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯಬೇಕಿಲ್ಲ; ನಾಡಕಚೇರಿ ಹಾಗೂ ಆನ್‌ಲೈನ್‌ನಲ್ಲೇ ಲಭ್ಯ!

ಗಂಗಾವತಿ: ಕಂದಾಯ ಇಲಾಖೆಯ ಹಳೆಯ ಕಡತಗಳು ಹಾಗೂ ದಾಖಲೆಗಳಿಗಾಗಿ ಸಾರ್ವಜನಿಕರು ಇನ್ಮುಂದೆ ತಾಲೂಕು ಕಚೇರಿಗೆ ಅಲೆಯುವ ಅಥವಾ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಭೂಸುರಕ್ಷಾ ಯೋಜನೆ’ಯಡಿ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದ (ರೆಕಾರ್ಡ್ ರೂಮ್) ಹಳೆಯ ಕಡತಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದ್ದು, ಸಾರ್ವಜನಿಕರು ಇನ್ಮುಂದೆ ನಾಡಕಚೇರಿ ಅಥವಾ ಆನ್‌ಲೈನ್ ಮೂಲಕವೇ ಸುಲಭವಾಗಿ ದಾಖಲೆಗಳನ್ನು ಪಡೆಯಬಹುದು ಎಂದು ಗಂಗಾವತಿ ತಹಶೀಲ್ದಾರರು ತಿಳಿಸಿದ್ದಾರೆ.
ಹಳೆಯ ಕಡತಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಮತ್ತು ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ದಾಖಲೆಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಸಾಂದರ್ಭಿಕ ಚಿತ್ರ 

ನಾಡಕಚೇರಿಗಳಲ್ಲೇ ಸಿಗಲಿದೆ ಸೇವೆ
ಗಂಗಾವತಿ ತಾಲೂಕಿನ ರೆಕಾರ್ಡ್ ರೂಮ್ ದಾಖಲೆಗಳನ್ನು ಈಗಾಗಲೇ ಡಿಜಿಟಲ್ ರೂಪಕ್ಕೆ ಬದಲಾಯಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕಿನ ಮೂರು ಪ್ರಮುಖ ನಾಡ ಕಾರ್ಯಾಲಯಗಳಾದ ಗಂಗಾವತಿ, ಮರಳಿ ಹಾಗೂ ವೆಂಕಟಗಿರಿ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ನಾಗರಿಕರು ತಮ್ಮ ವ್ಯಾಪ್ತಿಯ ಹೋಬಳಿಯ ನಾಡಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಕಂದಾಯ ದಾಖಲೆಗಳ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ
ನಾಡಕಚೇರಿ ಮಾತ್ರವಲ್ಲದೆ, ಸಾರ್ವಜನಿಕರು ಸ್ವತಃ ತಾವೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ನಾಗರಿಕ ಸೇವಾ ಪೋರ್ಟಲ್ https://recordroomkarnataka.gov.in/service4 ಗೆ ಭೇಟಿ ನೀಡಿ ದಾಖಲೆಗಾಗಿ ವಿನಂತಿ ಸಲ್ಲಿಸಬಹುದು.

ವಿಶೇಷ ಸೂಚನೆ: ಒಂದು ವೇಳೆ ನೀವು ಕೋರಿದ ದಾಖಲೆಗಳು ಆನ್‌ಲೈನ್‌ನಲ್ಲಿ ತಕ್ಷಣಕ್ಕೆ ಲಭ್ಯವಿಲ್ಲದಿದ್ದರೆ, ಪೋರ್ಟಲ್‌ನಲ್ಲಿ ಡಿಜಿಟಲ್ ಪ್ರತಿ ಸಿದ್ಧವಾದ ತಕ್ಷಣವೇ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶದ (SMS) ಮೂಲಕ ಮಾಹಿತಿ ನೀಡಲಾಗುವುದು.

ದಾಖಲೆಗಳನ್ನು ಪಡೆಯುವ ಸುಲಭ ಹಂತಗಳು:
ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ಬಳಸಿ ಕೇವಲ 5 ಹಂತಗಳಲ್ಲಿ ತಮ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು:
1. ಲಾಗಿನ್ ಪ್ರಕ್ರಿಯೆ: ಮೊದಲಿಗೆ ಕಂದಾಯ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ಲಾಗಿನ್ ಆಗಿ.
2. ಮಾಹಿತಿ ಭರ್ತಿ: ಅರ್ಜಿದಾರರ ವಿವರಗಳು ಮತ್ತು ನಿಮಗೆ ಬೇಕಾದ ಕಡತದ ವಿವರಗಳನ್ನು ನಮೂದಿಸಿ.
3. ಹುಡುಕಾಟ: ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ ಅಗತ್ಯವಿರುವ ದಾಖಲೆಯನ್ನು ಹುಡುಕಿ.
4. ಪುಟಗಳ ಆಯ್ಕೆ & ಶುಲ್ಕ ಪಾವತಿ: ಲಭ್ಯವಿರುವ ಕಡತದಲ್ಲಿ ನಿಮಗೆ ಅಗತ್ಯವಿರುವ ಪುಟಗಳನ್ನು ಆಯ್ದುಕೊಂಡು, ನಿಗದಿತ ಆನ್‌ಲೈನ್ ಶುಲ್ಕವನ್ನು ಪಾವತಿಸಿ.
5. ಡೌನ್‌ಲೋಡ್: ಯಶಸ್ವಿ ಪಾವತಿಯ ನಂತರ ನಿಮ್ಮ ಅಧಿಕೃತ ದಾಖಲೆಯ ಪ್ರತಿಯನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಿ.
ಗಂಗಾವತಿ ತಾಲೂಕಿನ ಸಾರ್ವಜನಿಕರು ತಾಲೂಕು ಕಚೇರಿಗೆ ಬರುವ ಸಮಯ ಮತ್ತು ಶ್ರಮವನ್ನು ಉಳಿಸುವ ಈ ಡಿಜಿಟಲ್ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಹಶೀಲ್ದಾರರು, ಗಂಗಾವತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Advertisement Image

 

WhatsApp Icon
Subscribe My YouTube