ಸ್ವಾತಂತ್ರ್ಯ ದಿನಾಚರಣೆ: ಹಿರಿಯ ಪತ್ರಕರ್ತ ಸುದರ್ಶನ್ ವೈದ್ಯ ಅವರಿಗೆ ಸನ್ಮಾನ

14/08/2026 9:40 PM Total Views: 138262

Gouse Dafedar

ಸ್ವಾತಂತ್ರ್ಯ ದಿನಾಚರಣೆ: ಹಿರಿಯ ಪತ್ರಕರ್ತ ಸುದರ್ಶನ್ ವೈದ್ಯ ಅವರಿಗೆ ಸನ್ಮಾನ

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ: ಹಲವಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಸುದರ್ಶನ್ ವೈದ್ಯ ಅವರಿಗೆ ಶ್ರೀ ಕೊಟ್ಟುರೇಶ್ವರ ವಿದ್ಯಾವರ್ಧಕ ಸಂಘದ (ಶಿಕ್ಷಣ ಸಂಸ್ಥೆ) ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಶರಣಬಸಪ್ಪ ಕೋಲ್ಕಾರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ನಾಡನುಡಿ, ಸಂಯುಕ್ತ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಸುವರ್ಣಪರ್ವ ದಿನಪತ್ರಿಕೆಗಳಲ್ಲಿ ಸುದೀರ್ಘ 30 ವರ್ಷಗಳ ಕಾಲ ವರದಿಗಾರರಾಗಿ ಮತ್ತು ಸಹ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಹಲವಾರು ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ರೂಪುಗೊಂಡಿದ್ದಾರೆ. ಗಂಗಾವತಿ ಭಾಗದಲ್ಲಿ ಸುದರ್ಶನ್ ವೈದ್ಯ ಅವರು ಮಾಧ್ಯಮ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ.

ನಮ್ಮ ಸಂಸ್ಥೆಯ ಬಗ್ಗೆಯೂ ಅಪಾರ ಅಭಿಮಾನವಿಟ್ಟುಕೊಂಡು, ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳ ಸುದ್ದಿಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಅಪಾರ ಸೇವೆ ಮತ್ತು ಅಭಿಮಾನವನ್ನು ಗೌರವಿಸಿ, ದಿನಾಂಕ 15-08-2026 ರಂದು ಬೆಳಿಗ್ಗೆ 8:45 ಕ್ಕೆ ಜರುಗುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಶ್ರದ್ಧಾಪೂರ್ವಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಈ ಶುಭ ಸಮಾರಂಭಕ್ಕೆ ಸುದರ್ಶನ್ ವೈದ್ಯ ಅವರು ಆಗಮಿಸಿ ಸನ್ಮಾನ ಸ್ವೀಕರಿಸಬೇಕಾಗಿ ಪ್ರಾಚಾರ್ಯರಾದ ಶರಣಬಸಪ್ಪ ಕೊಲ್ಕಾರ್ ಅವರು ವಿನಂತಿಸಿದ್ದಾರೆ.

 

Advertisement Image

WhatsApp Icon
Subscribe My YouTube