ರಾಯ್ಕರ್ ಕುಟುಂಬದ 3 ಜನ ಆತ್ಮಹತ್ಯೆ

04/07/2026 1:38 PM Total Views: 129901

Gouse Dafedar
oplus_48

ಬ್ರೇಕಿಂಗ್ ನ್ಯೂಸ್: ಸಾಲದ ಹೊರೆ ತಾಳಲಾರದೆ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಶಂಕೆ

ಗಂಗಾವತಿ :  ಪಟ್ಟಣದ ಪ್ರಶಾಂತ್ ನಗರದ ರಾಯ್ಕರ್ ಕುಟುಂಬದಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಸ್ಥಳೀಯ ಪ್ರಸಿದ್ಧ ‘ನ್ಯೂ ಕಾಮಾಕ್ಷಿ ಜೂವೆಲರ್ಸ್’ ಮಾಲೀಕರಾದ ಪ್ರಕಾಶ್ ರಾಯ್ಕರ್, ಅವರ ಪತ್ನಿ ಪ್ರಭಾ ರಾಯ್ಕರ್ ಹಾಗೂ ಪುತ್ರ ಶಶಾಂಕ್ ರಾಯ್ಕರ್ ಅವರು ಸಾಲದ ಬಾಧೆ ಹಾಗೂ ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಶಂಕಾಸ್ಪದ ಘಟನೆ ಬೆಳಕಿಗೆ ಬಂದಿದೆ.

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಕೋಟಿಗಟ್ಟಲೆ ಸಾಲದ ಹೊರೆ: ಮೃತ ಕುಟುಂಬವು ಸುಮಾರು 3 ರಿಂದ 4 ಕೋಟಿ ರೂಪಾಯಿಗಳಷ್ಟು ಭಾರಿ ಪ್ರಮಾಣದ ಸಾಲದ ಸುಳಿಗೆ ಸಿಲುಕಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಬ್ಯಾಂಕ್ ಸಾಲಕ್ಕೆ ಗ್ಯಾರಂಟಿ: ಮಾನ್ವಿ ಪಟ್ಟಣ ಬ್ಯಾಂಕ್‌ನಲ್ಲಿ ಜೆ. ನಾಗರಾಜ್ ಎಂಬುವವರಿಗೆ ಪ್ರಕಾಶ್ ರಾಯ್ಕರ್ ಅವರು ಸುಮಾರು 2 ಕೋಟಿ ರೂಪಾಯಿ ಸಾಲಕ್ಕೆ ಶ್ಯೂರಿಟಿ (ಗ್ಯಾರಂಟಿ) ಕೊಟ್ಟಿದ್ದರು ಎನ್ನಲಾಗಿದೆ.

ಕಿರುಕುಳದ ಆರೋಪ: ಇದರೊಂದಿಗೆ ವೈಯಕ್ತಿಕ ಸಾಲದ ಪ್ರಮಾಣವೂ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಾಲಗಾರರಿಂದ ತೀವ್ರ ರೀತಿಯ ಕಿರುಕುಳ ಮತ್ತು ಮಾನಸಿಕ ಒತ್ತಡ ಉಂಟಾಗಿತ್ತು. ಇದರಿಂದ ಮನನೊಂದೇ ಕುಟುಂಬದ ಮೂವರೂ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಪ್ರಗತಿಯಲ್ಲಿ:

Advertisement Image

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರ (Fingerprint Team) ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸದ್ಯಕ್ಕೆ ಮೂವರ ಶವಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆಯ ವರದಿ ಬಂದ ನಂತರವಷ್ಟೇ ಈ ಆತ್ಮಹತ್ಯೆಯ ಹಿಂದಿರುವ ನೈಜ ಕಾರಣ ಹಾಗೂ ಮೂಲಗಳು ಅಧಿಕೃತವಾಗಿ ಹೊರಬರಬೇಕಿದೆ.

ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೀತಾ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

WhatsApp Icon
Subscribe My YouTube