12/08/2026 7:57 PM Total Views: 142721

ಕ್ರೈಮ್ ಸ್ಪೆಷಲ್ ರಿಪೋರ್ಟ್:
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಖಾಕಿ-ರಾಜಕೀಯ ಅಂಗಳದಲ್ಲಿ ‘ಕೋಟಿ ಕೋಟಿ’ ಡೀಲ್ ಸದ್ದು!
DSP ನ್ಯಾಮಗೌಡಗೆ ₹1.5 ಕೋಟಿ ಲಂಚದ ಆರೋಪ:
ರಹಸ್ಯ ಆಡಿಯೋ ಬ್ರೇಕ್ ಆಗುತ್ತಾ?
ಗಂಗಾವತಿ: ಖಾಕಿ ಪಡೆಯ ಉನ್ನತ ಅಧಿಕಾರಿಯೊಬ್ಬರ ಹೆಸರು ಈಗ ಕೋಟಿ ಕೋಟಿ ಲಂಚದ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದು, ಇಡೀ ಕ್ಷೇತ್ರದಲ್ಲಿ ಮಹಾ ಭೂಕಂಪವನ್ನೇ ಸೃಷ್ಟಿಸಿದೆ! DSP ನ್ಯಾಮಗೌಡ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಲಂಚ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇರ ಹಾಗೂ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಹೊರಬೀಳುತ್ತಿದ್ದಂತೆಯೇ, ಅಧಿಕಾರಿಗಳ ವಲಯದಲ್ಲಿ ನಡುಕ ಶುರುವಾಗಿದ್ದರೆ, ರಾಜಕೀಯ ಅಂಗಳದಲ್ಲಿ ಆರೋಪ-ಪ್ರತ್ಯಾರೋಪಗಳ ಬಿರುಗಾಳಿಯೇ ಎದ್ದಿದೆ.
”ಸಾಕ್ಷಿ ಇದ್ದರೆ ಸಾಬೀತುಪಡಿಸಿ!” – ತಂಗಡಗಿ ಖಡಕ್ ಚಾಲೆಂಜ್!
ಆರೋಪ ಕೇಳಿಬಂದ ಬೆನ್ನಲ್ಲೇ ರಂಗಪ್ರವೇಶ ಮಾಡಿದ ಸಚಿವ ಶಿವರಾಜ್ ತಂಗಡಗಿ, ಈ ಆರೋಪಗಳಿಗೆ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. “ಬರಿ ಗಾಳಿಯಲ್ಲಿ ಗುಂಡು ಹಾರಿಸಿ, ತೇಜೋವಧೆ ಮಾಡಲು ಆರೋಪ ಮಾಡುವುದಲ್ಲ. ತಾಕತ್ತಿದ್ದರೆ ಸಾಕ್ಷಿ ಸಮೇತ ಸಾರ್ವಜನಿಕವಾಗಿ ಸಾಬೀತುಪಡಿಸಿ!” ಎಂದು ನೇರ ಸವಾಲೆಸೆದಿದ್ದಾರೆ. ತಂಗಡಗಿ ಅವರ ಈ ಓಪನ್ ಚಾಲೆಂಜ್, ಈಗ ಈ ಪ್ರಕರಣವನ್ನು ಮತ್ತಷ್ಟು ರೋಚಕ ಹಾಗೂ ಕುತೂಹಲಕಾರಿ ಘಟ್ಟಕ್ಕೆ ತಲುಪಿಸಿದೆ.
ಸಾಕ್ಷಿ ಇದ್ದರೂ ಮೌನವೇಕೆ? ಹುಟ್ಟುಹಾಕಿದೆ ಹತ್ತಾರು ಅನುಮಾನ!
ಸವಾಲು ಎಸೆದು ದಿನಗಳು ಉರುಳುತ್ತಿದ್ದರೂ, ಪ್ರಕರಣದ ಸುತ್ತಲಿನ ರಹಸ್ಯ ಮಾತ್ರ ಬಿಡಿಸಲಾಗದ ಗಂಟಾಗಿಯೇ ಉಳಿದಿದೆ. ಸಾರ್ವಜನಿಕ ವಲಯದಲ್ಲಿ ಈಗ ಸಾಲು ಸಾಲು ಪ್ರಶ್ನೆಗಳು ಎದ್ದಿವೆ:
ವಿಳಂಬದ ಹಿಂದೆ ಅಡಗಿದ ತಂತ್ರವೇನು?: ಸವಾಲನ್ನು ಸ್ವೀಕರಿಸಿ ಸಾಕ್ಷಿಗಳನ್ನು ಮುನ್ನೆಲೆಗೆ ತರಲು ಇಕ್ಬಾಲ್ ಅನ್ಸಾರಿ ಹಾಗೂ ಅವರ ಬೆಂಬಲಿಗರು ತಡಮಾಡುತ್ತಿರುವುದಾದರೂ ಯಾಕೆ?
ಬಹಿರಂಗವಾಗದ ಆಡಿಯೋ ವಿಡಿಯೋ ರೆಕಾರ್ಡಿಂಗ್: ಚಾಲೆಂಜ್ ಮಾಡುತ್ತಿರುವ ಕಾರ್ಯಕರ್ತರ ಹತ್ತಿರ ಪ್ರಕರಣಕ್ಕೆ ಸಂಬಂಧಿಸಿದ ಬೋಂಬ್‌ನಂತಹ ಆಡಿಯೋ/ವಿಡಿಯೋ ರೆಕಾರ್ಡಿಂಗ್ ಇದೆ ಎಂದು ಹೇಳಲಾಗುತ್ತಿದೆ. ಆದರೂ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ ಯಾಕೆ?
ಯಾರನ್ನೋ ಕಾಪಾಡುವ ಯತ್ನವೇ?: ಈ ಮೌನದ ಹಿಂದೆ ರಾಜಕೀಯ ಹೊಂದಾಣಿಕೆ ನಡೆಯುತ್ತಿದೆಯಾ ಅಥವಾ ಸೂಕ್ತ ಸಮಯಕ್ಕಾಗಿ ಕಾಯಲಾಗುತ್ತಿದೆಯಾ?
ಇದು ನಿಮ್ಮ ನಾಯಕನಿಗೆ ಎಸೆದ ನೇರ ಸವಾಲು..?
ಸಾಮಾಜಿಕ ಜಾಲ ತಾಣಗಳಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಕಾರ್ಯಕರ್ತರು ನೇರ ನೇರ ಸವಾಲುಗಳನ್ನು ಹಾಕುತ್ತಿದ್ದಾರೆ ಆದರು ತಮ್ಮ ನಾಯಕನಿಗೆ ಎಸೆದ ಸವಾಲಿನ ಬಾಂಬ್ ಸಿಡಿಸುತ್ತಿಲ್ಲ
ಕೈಯಲ್ಲಿ ಸ್ಫೋಟಕ ಸಾಕ್ಷಿ ಇಟ್ಟುಕೊಂಡು ಮೌನಕ್ಕೆ ಶರಣಾಗಿದ್ದಾರಾ? ಅಥವಾ ಈ ಕೋಟಿ ಕೋಟಿ ಲಂಚದ ಆರೋಪದ ಹಿಂದೆ ಬೇರೆಯದೇ ರಾಜಕೀಯ ತಂತ್ರಗಾರಿಕೆ ಅಡಗಿದೆಯಾ? ಈ ‘ಆಡಿಯೋ ಬಾಂಬ್’ ಸಿಡಿದರೆ ಯಾರ ಪಟ್ಟಾಭಿಷೇಕಕ್ಕೆ ಕಂಟಕ ಎದುರಾಗಲಿದೆ? ಖಾಕಿ ತೊಟ್ಟ ಅಧಿಕಾರಿಯ ಭವಿಷ್ಯವೇನಾಗಲಿದೆ?
ಉತ್ತರ ಸಿಗದ ಈ ಪ್ರಶ್ನೆಗಳಿಗೆ ಸತ್ಯ ಶೀಘ್ರದಲ್ಲೇ ಹೊರಬರಬೇಕಿದೆ!












