ಕೊಪ್ಪಳದ ರಾಜಕೀಯದಲ್ಲಿ ಬಿರುಗಾಳಿ: ಷಡ್ಯಂತ್ರ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ರಣತಂತ್ರ!

16/10/2026 9:45 AM Total Views: 144642

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ಜನಪರ ಹೋರಾಟ ಹಾಗೂ ದಿಟ್ಟತನಕ್ಕೆ ಹೆಸರಾಗಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕೊಪ್ಪಳ ಜಿಲ್ಲೆಯಾದ್ಯಂತ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಇದರ ಜೊತೆಗೆ ತಮ್ಮ ಸೋಲಿಗೆ ಕಾರಣರಾದವರ ವಿರುದ್ಧ ನೇರ ಹಾಗೂ ಗಂಭೀರ ವಾಗ್ದಾಳಿ ನಡೆಸಿದ್ದಾರೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಷಡ್ಯಂತ್ರ ಮಾಡಿದವರಿಗೆ ತಕ್ಕ ಪಾಠ:

“ನನ್ನನ್ನು ಷಡ್ಯಂತ್ರದ ಮೂಲಕ ಸೋಲಿಸಿರುವ ಕೊಪ್ಪಳ ಜಿಲ್ಲೆಯ ನಾಯಕರುಗಳಿಗೆ ಈ ಸಲ ತಕ್ಕ ಪಾಠವನ್ನು ಕಲಿಸುತ್ತೇನೆ. ನಾನು ಮಸೀದಿಗೆ ಒಂದು ಪತ್ರ ಬರೆದರೆ ಸಾಕು, ಇವರ ಸೋಲು ಖಚಿತ” ಎಂದು ಗುಡುಗಿರುವ ಇಕ್ಬಾಲ್ ಅನ್ಸಾರಿ, ಜಿಲ್ಲೆಯ ಹಾಲಿ ಶಾಸಕರು ಹಾಗೂ ಸಚಿವರನ್ನು ರಾಜಕೀಯವಾಗಿ ಮಣಿಸಲು ಈಗಿನಿಂದಲೇ ಭರ್ಜರಿ ಬಲೆ ಹೆಣೆಯುತ್ತಿದ್ದಾರೆ. ಅವರ ಈ ಖಡಕ್ ಹೇಳಿಕೆ ಕೊಪ್ಪಳ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕಂಪನ ಸೃಷ್ಟಿಸಿದೆ.

Advertisement Image

ಜಿಲ್ಲೆಯಾದ್ಯಂತ ಹೆಚ್ಚಿದ ಸಂಚಲನ:

ಕೊಪ್ಪಳ ಜಿಲ್ಲೆಯ ಪ್ರತಿಯೊಂದು ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಜನರ ಬಳಿಗೆ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಕ್ಬಾಲ್ ಅನ್ಸಾರಿ ಅವರು ರೂಪಿಸುತ್ತಿರುವ ಹೊಸ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದು ಕೇವಲ ಭೇಟಿಯಷ್ಟೇ ಅಲ್ಲದೆ, ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸುವ ನಿಜವಾದ ನಾಯಕತ್ವದ ದರ್ಶನ ಮಾಡಿಸುತ್ತಿದೆ.

ಬಡವರ ಪರ ನಿರಂತರ ಹೋರಾಟ ಹಾಗೂ ಮುಂದಿನ ನಡೆ:

ಕೇವಲ ರಾಜಕೀಯ ಲೆಕ್ಕಾಚಾರಗಳಷ್ಟೇ ಅಲ್ಲದೆ, ಸದಾ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುವುದೇ ತಮ್ಮ ಮೂಲ ಉದ್ದೇಶ ಎಂದು ಅನ್ಸಾರಿ ಪ್ರತಿಪಾದಿಸುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬ ಬಡವನ ಧ್ವನಿಯಾಗುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಲು ಈ ರಣತಂತ್ರಗಳು ವೇದಿಕೆ ಒದಗಿಸುತ್ತಿವೆ.

 

WhatsApp Icon
Subscribe My YouTube