ಗಂಗಾವತಿಯಲ್ಲಿ ಪೌರಾಯುಕ್ತರ ಬಿಗ್ ಆಪರೇಷನ್: ಶತಕೋಟಿ ಮೌಲ್ಯದ ಸರ್ಕಾರಿ ಜಾಗ ನುಂಗಿದ್ದ ಕ್ಲಬ್ ಖಾತಾ ರದ್ದು, ಜಾಗ ಕಬಳಿಸಿದವರಿಗೆ ಪ್ರಾದೇಶಿಕ ಆಯುಕ್ತರ ಕೌಂಟರ್!

05/08/2026 2:40 PM Total Views: 136303

Gouse Dafedar

ಗಂಗಾವತಿ: ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಕಾನೂನುಬಾಹಿರವಾಗಿ ಖಾತೆ ಮಾಡಿಕೊಂಡು, ದಶಕಗಳಿಂದ ಕಬಳಿಸಲು ಯತ್ನಿಸುತ್ತಿದ್ದ ಪಬ್ಲಿಕ್ ಕ್ಲಬ್‌ನ ಅಕ್ರಮಕ್ಕೆ ಗಂಗಾವತಿ ಪೌರಾಯುಕ್ತರು ಸಿಂಹಸ್ವಪ್ನವಾಗಿ ಬದಲಾಗಿದ್ದಾರೆ! ಕಾನೂನಿನ ಅಡಿಯಲ್ಲೇ ಹೋರಾಟ ನಡೆಸಿ ಸರ್ಕಾರಿ ಆಸ್ತಿಯನ್ನು ಮರಳಿ ಸಾರ್ವಜನಿಕರ ಆಸ್ತಿಯನ್ನಾಗಿ ಮಾಡಲು ಪೌರಾಯುಕ್ತರು ಹೂಡಿದ ಮಾಸ್ಟರ್ ಪ್ಲಾನ್‌ಗೆ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ಅಂತಿಮ ಮುದ್ರೆ ಒತ್ತಿದೆ.

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ವಾದ-ವಿವಾದದ ಅಸಲಿ ಕಥೆ: ಕೋರ್ಟ್ ಅಂಗಳದಲ್ಲಿ ಸಿಂಹದಂತೆ ಗರ್ಜಿಸಿದ ಪೌರಾಯುಕ್ತರು!

ಗಂಗಾವತಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 19 ರಲ್ಲಿರುವ, ಸರ್ವೇ ನಂಬರ್ 198/2 ರಲ್ಲಿದ್ದ (5411.7855 ಚದರ ಮೀಟರ್ ವಿಸ್ತೀರ್ಣ) ಕೋಟ್ಯಂತರ ಮೌಲ್ಯದ ಭೂಮಿಯ ಮೇಲೆ ‘ಪಬ್ಲಿಕ್ ರಿಕ್ರಿಯೇಶನ್ ಅಸೋಸಿಯೇಷನ್‘ ಕಣ್ಣು ಬಿದ್ದಿತ್ತು. ಯಾವುದೇ ಮಾಲೀಕತ್ವದ ದಾಖಲೆ (Title Deed) ಅಥವಾ ಅಧಿಕೃತ ಹಂಚಿಕೆ ಪತ್ರ (Allotment Letter) ಇಲ್ಲದಿದ್ದರೂ, 1998 ರಲ್ಲಿ ಮಾಡಿಕೊಳ್ಳಲಾಗಿದ್ದ ಅಕ್ರಮ ಖಾತಾ ಮತ್ತು ನಮೂನೆ-3 ನ್ನೇ ಅಸ್ತ್ರವಾಗಿಸಿಕೊಂಡು ಕ್ಲಬ್ ಆಡಳಿತ ಮಂಡಳಿ ಅಲ್ಲಿ ಶಾಲಾ ಕಟ್ಟಡಗಳು, 11 ಶಟಲ್ ಕೋರ್ಟ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಾನೂನುಬಾಹಿರವಾಗಿ ನಿರ್ಮಿಸಿಕೊಂಡಿತ್ತು.

oplus_8388608

ಕ್ಲಬ್ ನೀಡಿದ ಕಾಗದದ ವಾದ:

Advertisement Image

“ನಾವು 63 ವರ್ಷಗಳಿಂದ ನಿರಂತರ ಸ್ವಾಧೀನದಲ್ಲಿದ್ದೇವೆ, ನಮಗೆ ‘ಅಡ್ವರ್ಸ್ ಪೊಸೆಷನ್‘ (Adverse Possession) ಅಡಿಯಲ್ಲಿ ಹಕ್ಕಿದೆ. 1938 ರ ಕಾಲದಿಂದ ವಿದ್ಯುತ್, ದೂರವಾಣಿ ಸಂಪರ್ಕ ಹೊಂದಿದ್ದೇವೆ. 90 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಕಟ್ಟಡ ನಿರ್ಮಿಸಿದ್ದೇವೆ,” ಎಂದು ಕ್ಲಬ್ ಆಡಳಿತ ಮಂಡಳಿ ಜಂಭದ ವಾದ ಮಂಡಿಸಿತ್ತು. ಇದಕ್ಕೆ ಪೌರಾಯುಕ್ತರ ಕಡಕ್ ಕೌಂಟರ್ ಕ್ಲಬ್‌ಗೆ ನೋಟಿಸ್ ಜಾರಿ ಮಾಡಿ, ಅವರ ಬಳಿ ಇದ್ದ ‘ಸಿಂಗಲ್ ಕಾಗದ’ದ ಕಳ್ಳಾಟವನ್ನು ಹೊರಗೆಳೆದ ಪೌರಾಯುಕ್ತರು, ವಕೀಲ ಯು.ಆರ್. ವಿವೇಕಾನಂದ ಅವರ ಮೂಲಕ ಕೆಳಕಂಡ ಕಡಕ್ ವಾದಗಳನ್ನು ಕೋರ್ಟ್‌ನಲ್ಲಿ ಮಂಡಿಸಿದರು:

ಸರ್ಕಾರಿ ಆಸ್ತಿ: ದಿಶಾಂಕ್ (Dishank), ಕಂದಾಯ ಮತ್ತು ತಹಸೀಲ್ದಾರ್ ವರದಿಗಳ ಪ್ರಕಾರ ಈ ಜಮೀನು ಅಚ್ಚ-ಅಸಲಿ ಸರ್ಕಾರಿ ಆಸ್ತಿಯಾಗಿದೆ.

ಅಕ್ರಮ ನಿರ್ಮಾಣ: ನಗರಸಭೆಯಿಂದ ಕಟ್ಟಡ ರಚನಾ ಪರವಾನಗಿ ಪಡೆಯದೇ, ಮಿತಿ ಮೀರಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳು ಮತ್ತು ಶಾಲೆಗಳನ್ನು ಕಟ್ಟಿ ಧನದಾಹಿಗಳಂತೆ ಬಾಡಿಗೆ ವಸೂಲಿ ಮಾಡಲಾಗುತ್ತಿದೆ.

ಸುಳ್ಳು ದಾಖಲೆ: 15.01.1998 ರಲ್ಲಿ ಮೂಲ ದಾಖಲೆಗಳೇ ಇಲ್ಲದೆ ಪಡೆಯಲಾಗಿದ್ದ ನಮೂನೆ-3 ಮತ್ತು ಡಿಮಾಂಡ್ ರಿಜಿಸ್ಟರ್ ಖಾತೆ ಸಂಪೂರ್ಣ ಕಾನೂನುಬಾಹಿರ.

Oplus_131072

🏛️ ಪ್ರಾದೇಶಿಕ ಆಯುಕ್ತರ ಐತಿಹಾಸಿಕ ತೀರ್ಪು: ಪೌರಾಯುಕ್ತರಿಗೆ ಜಯ!

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಹೀರಾ ನಸೀಮ (ಭಾ.ಆ.ಸೇ.) ಅವರ ನ್ಯಾಯಾಲಯದಲ್ಲಿ ಗಂಗಾವತಿ ತಹಸೀಲ್ದಾರ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವರದಿಯನ್ನು ಪರಿಶೀಲಿಸಿದಾಗ, ಪೌರಾಯುಕ್ತರು ನೀಡಿದ್ದ ಪ್ರತಿಯೊಂದು ಕಡಕ್ ವಾದವೂ 100% ನಿಜವೆಂದು ಸಾಬೀತಾಯಿತು.

ನ್ಯಾಯಾಲಯದ ಅಂತಿಮ ಆದೇಶ:

ಖಾತಾ ಸಂಪೂರ್ಣ ರದ್ದು: 1998 ರ ಆಧಾರಿತ ಪಬ್ಲಿಕ್ ಕ್ಲಬ್‌ನ ಹೆಸರಿನಲ್ಲಿದ್ದ ಖಾತಾ, ನಮೂನೆ-3 ಮತ್ತು ಎಲ್ಲಾ ದಾಖಲೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ಸರ್ಕಾರಕ್ಕೆ ಮುಟ್ಟುಗೋಲು: ಸರ್ವೇ ನಂ. 198/2 ರಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕನ್ನಡ ಮಾಧ್ಯಮ ಶಾಲಾ ಕಟ್ಟಡ, ಶ್ರೀ ಗುರು ಪುಟ್ಟರಾಜ ಪಬ್ಲಿಕ್ ಶಾಲೆ, 11 ವಾಣಿಜ್ಯ ಮಳಿಗೆಗಳು ಹಾಗೂ ಸಭಾಂಗಣಗಳನ್ನು ನಗರಸಭೆಯ (ಸರ್ಕಾರದ) ಸ್ವಾಧೀನಕ್ಕೆ ತೆಗೆದುಕೊಳ್ಳಲು ಆದೇಶಿಸಲಾಗಿದೆ!

🔥 ಪೌರಾಯುಕ್ತರ ದಿಟ್ಟ ಹೆಜ್ಜೆಗೆ ಸಾರ್ವಜನಿಕರ ಶ್ಲಾಘನೆ!

ವರ್ಷಗಳಿಂದ ಸರ್ಕಾರಿ ಭೂಮಿಯನ್ನು ತಮ್ಮದೇ ಖಾಸಗಿ ಆಸ್ತಿಯಂತೆ ಅನುಭವಿಸುತ್ತಿದ್ದ ಪ್ರಭಾವಿಗಳಿಗೆ ಗಂಗಾವತಿ ಪೌರಾಯುಕ್ತರು ನೀಡಿದ ಈ ಕಾನೂನಾತ್ಮಕ ಏಟು, ನಗರದಲ್ಲಿ ಇತಿಹಾಸ ಸೃಷ್ಟಿಸಿದೆ. ಸರ್ಕಾರಿ ಜಾಗವನ್ನು ನುಂಗಲು ಯತ್ನಿಸುವ ಭೂಬಕಾಸುರರಿಗೆ ಪೌರಾಯುಕ್ತರು ತೆಗೆದುಕೊಂಡ ಈ ದಿಟ್ಟ ಹಾಗೂ ಕಾನೂನುಬದ್ಧ ಕ್ರಮವೇ ಈಗ ಗಂಗಾವತಿ ನಗರಸಭೆಯ ಹೆಮ್ಮೆಯ ಸಂಕೇತವಾಗಿದೆ.

WhatsApp Icon
Subscribe My YouTube