ಗಂಗಾವತಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮರೆಡ್ಡಿ ಪಾಟೀಲ್ ಅಧಿಕಾರ ಸ್ವೀಕಾರ.

28/08/2026 8:49 PM Total Views: 139825

Gouse Dafedar

 

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮರೆಡ್ಡಿ ಪಾಟೀಲ್ ಅಧಿಕಾರ ಸ್ವೀಕಾರ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ: ನಗರಸಭೆಯ ನೂತನ ಪ್ರಭಾರ ಪೌರಾಯುಕ್ತರಾಗಿ ಕೆ.ಎ.ಎಸ್. ಅಧಿಕಾರಿ ರಾಮರೆಡ್ಡಿ ಪಾಟೀಲ್ ಅವರು ಇಂದು ಸಂಜೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಸ್ತುತ ಗಂಗಾವತಿ ತಾಲೂಕು ಪಂಚಾಯತ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ (EO) ಸೇವೆ ಸಲ್ಲಿಸುತ್ತಿರುವ ರಾಮರೆಡ್ಡಿ ಪಾಟೀಲ್ ಅವರ ದಕ್ಷತೆ ಹಾಗೂ ಜನಪರ ಕಾರ್ಯವೈಖರಿಯನ್ನು ಗುರುತಿಸಿ ಅವರಿಗೆ ನಗರಸಭೆಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.

Advertisement Image

ಕಳೆದ ನಾಲ್ಕು ವರ್ಷಗಳಿಂದ ಗಂಗಾವತಿ ನಗರಸಭೆಯ ಪೌರಾಯುಕ್ತರಾಗಿ ಯಶಸ್ವಿಯಾಗಿ ಆಡಳಿತ ನಡೆಸಿ, ಜನಪ್ರಿಯತೆ ಗಳಿಸಿದ್ದ ಆರ್‌. ವಿರೂಪಾಕ್ಷ ಮೂರ್ತಿ ಅವರ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಈ ಹೊಸ ನೇಮಕಾತಿ ನಡೆದಿದೆ. ತಾಲೂಕು ಪಂಚಾಯತ್‌ನಲ್ಲಿ ತಮ್ಮ ಕ್ರಿಯಾಶೀಲ ಆಡಳಿತದ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದ ರಾಮರೆಡ್ಡಿ ಪಾಟೀಲ್ ಅವರು, ಈಗ ನಗರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಮೆರುಗು ನೀಡಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

WhatsApp Icon
Subscribe My YouTube