31/01/2026 1:57 PM Total Views: 95101

ಸರಕಾರಿ ಕುರ್ಚಿಗಳ ಮೇಲೆ ‘ಸೌದಾಗರ್ರು’: ರಾಮರೆಡ್ಡಿ-ದೇವಣ್ಣ ಕಂಪನಿಯ ಅಗ್ರಿಮೆಂಟ್ ದಂಧೆ!
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ವಿಶೇಷ ವರದಿ: ಗೌಸ್ ದಫೇದಾರ್ ಪಬ್ಲಿಕ್ ಪವರ್ ನ್ಯೂಸ್.
ಗಂಗಾವತಿ : ಕಾಗದದ ಮೇಲೆ ಸಭ್ಯರಂತೆ ಕಾಣುವ ಇವರ ಮುಖವಾಡದ ಹಿಂದಿನ ಕಥೆ ಓದಿ:

ಅದು ಅಧಿಕಾರದ ಅಮಲು. ಜನರ ತೆರಿಗೆ ಹಣವನ್ನು ತಮ್ಮ ಮನೆಯ ಅಟ್ಟದ ಮೇಲೆ ಕುಳಿತು ಹಂಚಿಕೊಳ್ಳುವ ಅಹಂಕಾರ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಪಡಸಾಲೆಗಳಲ್ಲಿ ಈಗ ಬರೀ ‘ಅಗ್ರಿಮೆಂಟ್’ ಸದ್ದು ಕೇಳಿಸುತ್ತಿದೆ. ಅಲ್ಲಿ ನಿಯಮಗಳಿಲ್ಲ, ನ್ಯಾಯವಿಲ್ಲ; ಇರುವುದು ಕೇವಲ ಪರ್ಸೆಂಟೇಜ್ ಲೆಕ್ಕಾಚಾರ ಮಾತ್ರ!
ರಾಮರೆಡ್ಡಿಯ ‘ತಾಲೂಕು’ ದರ್ಬಾರು!

ತಾಲೂಕು ಪಂಚಾಯತ್ ಅಂಗಳದಲ್ಲಿ ಕುಳಿತು ಫೈಲುಗಳನ್ನು ಜಾಲಾಡುವ ಈ ರಾಮರೆಡ್ಡಿ ಪಾಟೀಲ ಎಂಬ ಅಧಿಕಾರಿ ಮಾಡುತ್ತಿರುವುದು ಜನಸೇವೆಯಲ್ಲ, ಬದಲಿಗೆ ‘ ಹಾಲಿ ಮತ್ತು ಮಾಜಿ ಶಾಸಕರ ಹೆಸರಿನ’ ವ್ಯಾಪಾರ! ಹಾಲಿ ಮತ್ತು ಮಾಜಿ ಶಾಸಕರು ಇವರ ಕಿವಿಯಲ್ಲಿ ಬಂದು ಮಂತ್ರ ಹೇಳಿದರೋ ಇಲ್ಲವೋ ಗೊತ್ತಿಲ್ಲ, ಆದರೆ “ಇದು ಶಾಸಕರ ಆರ್ಡರ್” ಎಂದು ಹೇಳುತ್ತಾ ತಮಗಿಷ್ಟ ಬಂದವರಿಗೆ ಅಗ್ರಿಮೆಂಟ್ ಪೇಪರ್ ಹಂಚುತ್ತಿದ್ದಾರೆ. ಅರ್ಹ ಗುತ್ತಿಗೆದಾರರು ಬೀದಿಯಲ್ಲಿ ನಿಂತು ಗೋಳಾಡುತ್ತಿದ್ದರೆ, ಈ ಪಾಟೀಲರು ಮಾತ್ರ ಎಸಿ ರೂಮಿನಲ್ಲಿ ಕುಳಿತು ‘ಖಾಸಗಿ’ ಡೀಲ್ ಕುದುರಿಸುತ್ತಿದ್ದಾರೆ.

ದೇವಣ್ಣ ಕಟ್ಟಿಯ ಕಿಲಾಡಿತನ..!
ಇತ್ತ ಜಿಲ್ಲಾ ಪಂಚಾಯತ್‌ನಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ನಡೆಸುತ್ತಿರುವುದು ಮಗದೊಬ್ಬ ಮಹಾಶಯ ದೇವಣ್ಣ ಕಟ್ಟಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿ ಎಂದು ಸರ್ಕಾರ ಕಳುಹಿಸುವ ಕೋಟಿ ಕೋಟಿ ಅನುದಾನ ಇವರ ಟೇಬಲ್ ಮೇಲೆ ಬಂದಾಗ, ಅದು ಅಭಿವೃದ್ಧಿಯ ದಾರಿಯನ್ನೇ ಮರೆತುಬಿಡುತ್ತದೆ. ಹಾಲಿ ಶಾಸಕರು ಇಲ್ಲವೇ ಮಾಜಿಗಳ ಹೆಸರನ್ನು ಗುರಾಣಿ ಮಾಡಿಕೊಂಡು, ಈ ದೇವಣ್ಣ ಕಟ್ಟಿ ಅವರು ಹಣದ ಹೊಳೆ ಹರಿಸುತ್ತಿರುವುದು ಬರೀ ತನ್ನವರಿಗೆ ಮತ್ತು ತನ್ನ ಜೇಬು ತುಂಬಿಸುವವರಿಗೆ ಮಾತ್ರ. ಅಲ್ಲಿಗೆ ನೈತಿಕತೆ ಎಂಬುದು ಕಟ್ಟಿ ಹಾಕಿದ ಹಸುವಿನಂತೆ ನರಳುತ್ತಿದೆ!

ಹಾಲಿ. ಮಾಜಿ ಶಾಸಕರ ಹೆಸರೇ ಇವರ ಬಂಡವಾಳ!
ಗಮನಿಸಿ, ಈ ಇಬ್ಬರೂ ಅಧಿಕಾರಿಗಳ ಮೋಡಸ್ ಆಪರೇಂಡಿ (Modus Operandi) ಒಂದೇ. ಒಬ್ಬರು ತಾಲೂಕಿನಲ್ಲಿ ತಳವೂರಿದ್ದರೆ, ಇನ್ನೊಬ್ಬರು ಜಿಲ್ಲಾ ಕೇಂದ್ರದಲ್ಲಿ ಬೇರು ಬಿಟ್ಟಿದ್ದಾರೆ. ಯಾರಾದರೂ ಪ್ರಶ್ನೆ ಮಾಡಿದರೆ ಸಾಕು, “ನಮಗೇನು ಗೊತ್ತು ಸ್ವಾಮಿ, ಎಂಎಲ್ಎ ಸಾಹೇಬರು ಮತ್ತು ಅಲಿಖಾನ್ ಈ ಪಟ್ಟಿ ಕೊಟ್ಟಿದ್ದಾರೆ, ಅವರ ವಿರುದ್ಧ ಹೋಗೋಕೆ ನಾವ್ಯಾರು?” ಎಂದು ಮುಗ್ಧವಾಗಿ ಕೈ ಚೆಲ್ಲುತ್ತಾರೆ. ಆದರೆ ಈ ಮುಗ್ಧತೆಯ ಹಿಂದೆ ಇರುವುದು ಮಾತ್ರ ಕೋಟಿ ಕೋಟಿ ಭ್ರಷ್ಟಾಚಾರದ ‘ಬ್ರಹ್ಮಾಂಡ’ ರಹಸ್ಯ!
ಇದು ಆರಂಭವಷ್ಟೇ…
ರಾಮರೆಡ್ಡಿ ಪಾಟೀಲರು ಸಹಿ ಮಾಡಿದ ಆ ‘ವಿಶೇಷ’ ಫೈಲುಗಳ ಅಸಲಿಯತ್ತೇನು?
ದೇವಣ್ಣ ಕಟ್ಟಿಯವರು ಮಾಡಿಕೊಂಡಿರುವ ರಹಸ್ಯ ಅಗ್ರಿಮೆಂಟ್‌ಗಳ ಬೆಲೆ ಎಷ್ಟು? ಶಾಸಕರ ಹೆಸರನ್ನು ಇವರು ಎಷ್ಟು ಕೋಟಿಗೆ ಮಾರಿಕೊಂಡಿದ್ದಾರೆ?
ಬೆಚ್ಚಿಬೀಳಿಸುವ ದಾಖಲೆಗಳೊಂದಿಗೆ ಪಬ್ಲಿಕ್ ಪವರ್ ನ್ಯೂಸ್ ಬರಲಿದೆ. ಇವರ ಭ್ರಷ್ಟ ಸಾಮ್ರಾಜ್ಯದ ಇಂಚಿಂಚು ಮಾಹಿತಿ ಈಗ ನಮ್ಮ ಕೈಯಲ್ಲಿದೆ.
ನಿರೀಕ್ಷಿಸಿ…









