ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ್ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಆಯ್ಕೆ.

24/01/2026 5:33 PM Total Views: 95097

Gouse Dafedar

 

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ್ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ” ಆಯ್ಕೆ.

ಗಂಗಾವತಿ: ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಶನ್ (ರಿ) ಧಾರವಾಡ ಇವರಿಂದ ನೀಡಲಾಗುವ ರಾಷ್ಟ್ರೀಯ ಸಮಾಜಸೇವಾ ರತ್ನ ಪ್ರಶಸ್ತಿಗೆ ಗಂಗಾವತಿಯ ಕಲಾವಿದರು ಹಾಗೂ ಸಮಾಜಸೇವಕರಾದ ಶ್ರೀಮತಿ ರಾಧಾ ಉಮೇಶ ಅವರು ಆಯ್ಕೆಯಾಗಿದ್ದಾರೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

​ಅವರಿಗೆ ಫೆಬ್ರವರಿ-01 ರಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆಯಲಿರುವ ಕವನ ಸಂಕಲನ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

​ಶ್ರೀಮತಿ ರಾಧಾ ಉಮೇಶ ಅವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಸಮಾಜಸೇವಕರಾಗಿ ಸೇವೆ ಸಲ್ಲಿಸುತ್ತಾ,  ರಾಷ್ಟ್ರೀಯ ಮಹಾಮಂಡಳಿಯ ಮಹಿಳಾ ಜಿಲ್ಲಾಧ್ಯಕ್ಷರಾಗಿ ಹಾಗೂ ನಿರಂತರ ಕಾವ್ಯರಚನೆಕಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುತ್ತಾರೆ. ಇವರ ಬಹುಮುಖಿ ಸೇವೆಯನ್ನು ಗುರುತಿಸಿದ ಶ್ರೀನಿಧಿ ಫೌಂಡೇಶನ್ (ರಿ) ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಶನ್ (ರಿ) ಧಾರವಾಡ ರವರು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

Advertisement Image

​ಇವರಿಗೆ ಗಂಗಾವತಿಯ ಸಮಸ್ತ ನಾಗರಿಕರು, ಕಲಾವಿದರು, ಸಾಹಿತಿಗಳು, ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.

WhatsApp Icon
Subscribe My YouTube