ಒತ್ತುವರಿ ಭೂ ಮಾಲೀಕರಿಂದ ಜೀವ ಬೆದರಿಕೆ ಭದ್ರತೆ ನೀಡುವಂತೆ ಜೋಗಿನ ರಮೇಶ್ ನಾಯಕ ಲೋಕಾಯುಕ್ತ ಎಸ್ ಪಿ ಗೆ ಮನವಿ.

29/11/2025 7:43 PM Total Views: 95092

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಒತ್ತುವರಿ ಭೂ ಮಾಲೀಕರಿಂದ ಜೀವ ಬೆದರಿಕೆ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಭದ್ರತೆ ನೀಡುವಂತೆ ಜೋಗಿನ ರಮೇಶ್ ನಾಯಕ ಲೋಕಾಯುಕ್ತ ಎಸ್ ಪಿ ಗೆ ಮನವಿ.

ಗಂಗಾವತಿ: ಪಿತ್ರಾಜಿತ ಆಸ್ತಿಯ ವಾರಸುದಾರ ಜೋಗಿನ್ ಭರಮಪ್ಪ ತಂದೆ ಅನಾಳಪ್ಪ ವಾಲ್ಮೀಕಿ ನಾಯಕ ಅವರ ಭೂಮಿಗೆ ಸಂಬಂಧಿಸಿದಂತೆ ಗಂಗಾವತಿ ನ್ಯಾಯಾಲಯದಲ್ಲಿ 8/2021 ರಂದು ದಾವೆ ಹೂಡಲಾಗಿರುತ್ತದೆ.

 

Advertisement Image

ಈ ಹಿನ್ನೆಲೆಯಲ್ಲಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಂದ ಅನಾಮಿಕ ಕರೆಗಳು ಬರುವ ಮೂಲಕ ಜೀವ ಬೆದರಿಕೆ ಹಾಕಲಾಗುತ್ತಿದ್ದು. ಇದಕ್ಕೆ ಸಂಬಂಧಿಸಿದಂತೆ ಜೀವ ಭದ್ರತೆ ಕಲ್ಪಿಸುವಂತೆ ಜೋಗಿನ ರಮೇಶ್ ನಾಯಕ  ಇಂದು ಶನಿವಾರ ಲೋಕಾಯುಕ್ತ ಎಸ್ಪಿ ಯವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಾ ಪಂಚಾಯತ್ ಮಂಥನ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಕುಂದು ಕೊರತೆಗಳನ್ನು ಸ್ವೀಕರಿಸಲು ಆಗಮಿಸಿದ ಲೋಕಾಯುಕ್ತರಿಗೆ ಅರ್ಜಿದಾರರಾದ ಜೋಗಿನ್ ರಮೇಶ ನಾಯಕ ಅವರು ಗಂಗಾವತಿ ನಗರದ ಸರ್ವೆ ನಂಬರ್ 46 /ಅ ಸಂಬಂಧಿಸಿದಂತೆ 16 ಎಕರೆ 11ಗುಂಟೆ ಪೈಕಿ ಸರ್ಕಾರಕ್ಕೆ 1 ಎಕರೆ 33 ಗುಂಟೆ ಟಿ.ಡಿ. ಪಿ. ಗೆ ಸ್ವಾದಿನ ಗೊಂಡಿರುತ್ತದೆ.
ಉಳಿದ ಭೂಮಿ 14 ಎಕರೆ 18 ಗುಂಟೆ ಗಣ್ಯ ವ್ಯಕ್ತಿಗಳ ಪ್ರಭಾವದಿಂದ ಪಹಣಿಯಲ್ಲಿ ಬೇರೆಯವರು ಸೇರ್ಪಡೆ ಆಗಿರುತ್ತಾರೆ ಮತ್ತು  ಬೇರೆ ವ್ಯಕ್ತಿಗಳಿಗೆ ವಹಿವಾಟು ಕೂಡ ಆಗಿರುತ್ತದೆ ಪ್ರಭಾವಿ ರಾಜಕಾರಣಿಗಳು ಹಾಗೂ ಉದ್ಯಮಿಗಳು ಕೂಡ ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮೂಲ ದಾಖಲೆಗಳನ್ನು ನಾವು ಹೊಂದಿದ್ದು. ಮತ್ತಷ್ಟು ದಾಖಲಾತಿ ಗಳಿಗಾಗಿ ಸಂಬಂಧಿಸಿದಂತೆ ಇಲಾಖೆಗಳಿಗೆ ಮನವಿ ಪತ್ರ ಹಾಗೂ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದರು ಸಹ ಇದುವರೆಗೂ ಯಾವುದೇ ಅಧಿಕಾರಿ ವರ್ಗದವರು ಸ್ಪಂದಿಸದೆ ಇರುವುದು ನಮಗೆ ಬೇಸರ ತಂದಿದೆ ಎಂದು ತಮ್ಮ ನೋವನ್ನು ಲೋಕಾಯುಕ್ತರ ಮುಂದೆ ತಿಳಿಸಿದರು.

ಕರ್ನಾಟಕದ ರಾಜ್ಯಪಾಲರು. ಮುಖ್ಯಮಂತ್ರಿಗಳು. ಕೊಪ್ಪಳ ಉಸ್ತುವಾರಿ ಸಚಿವರು. ಗಂಗಾವತಿ ಶಾಸಕರು. ಹಾಗೂ ಸoಬಂಧಪಟ್ಟ ಅಧಿಕಾರಿಗಳಿಗೂ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರಿಗೂ ನಮಗೆ ಸೂಕ್ತ ರಕ್ಷಣೆ ಕೊಡುವಂತೆ ಮನವಿ ಸಲ್ಲಿಸಿದರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಗಮನಿಸಿದರೆ ಪ್ರಭಾವಿಗಳ ಒತ್ತಡಕ್ಕೆ ಎಲ್ಲಾ ಅಧಿಕಾರಿಗಳು ಒಳಗಾಗಿದ್ದಾರೆ ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಉದಾಹರಣೆ ಎಂಬಂತೆ ಇತ್ತೀಚಿಗಷ್ಟೇ ಗಂಗಾವತಿಯಲ್ಲಿ ಕೊಲೆಗಳ ಪ್ರಕರಣ ಮಾರಣ್ಯಂತಿಕ ಹಲ್ಲೆಗಳು ಸೇರಿದಂತೆ ಪ್ರಕರಣಗಳು ಹೆಚ್ಚುತ್ತಿದ್ದು ನಮ್ಮ ಜೀವಕ್ಕೂ ಕೂಡ ಆಪತ್ತು ಬರುವ ಸಾಧ್ಯತೆಗಳು ಇದ್ದು. ನಮ್ಮನ್ನೇ ನಂಬಿಕೊಂಡಿರುವ ನಮ್ಮ ಕುಟುಂಬಸ್ಥರ ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ ಎಸ್ಪಿ ಅವರಿಗೆ ಜೋಗಿನ್ ರಮೇಶ ನಾಯಕ  ಮನವಿ ಮಾಡಿದ್ದಾರೆ.

 

WhatsApp Icon
Subscribe My YouTube