ಅಪ್ರಾಪ್ತ ವಯಸ್ಸಿನಲ್ಲಿ ಬೈಕ್ ಚಾಲನೆ 26000 ದಂಡ ವಿಧಿಸಿದ ನ್ಯಾಯಾಲಯ.

26/11/2025 5:37 AM Total Views: 111952

Gouse Dafedar

ಅಪ್ರಾಪ್ತ ವಯಸ್ಸಿನಲ್ಲಿ ಬೈಕ್ ಚಾಲನೆ
26000 ದಂಡ ವಿಧಿಸಿದ ನ್ಯಾಯಾಲಯ

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ : ಗಂಗಾವತಿಯ ಮಹಾರಾಣಾ ಪ್ರತಾಪ್ ಸರ್ಕಲ್ ಕಡೆಯಿಂದ ಜುಲೈ ನಗರದ ಕಡೆ ಅತಿ ವೇಗದಲ್ಲಿ ಮತ್ತು ಅಡ್ಡಾ ದಿಡ್ಡಿಯಾಗಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಬೈಕ್ ಚಾಲನೆ ಮಾಡುವುದನ್ನು ನಿಲ್ಲಿಸಿ ದಿನಾಂಕ 07.01.2025 ರಂದು

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ ಸಂಚಾರಿ ಠಾಣೆಯ ಪಿಎಸ್ಐ ಶ್ರೀಮತಿ ಶಾರದಾ ಅವರು ಅಪ್ರಾಪ್ತನಿಗೆ ವಾಹನ ನೀಡಿದ ವಾಹನ ಮಾಲೀಕರಾದ ತಿಮ್ಮಣ್ಣ ತಂದೆ ಮಲ್ಲಪ್ಪ ಸಾ. ಉಪ್ಪಾರ ಓಣಿ ಗಂಗಾವತಿ ಈತನ ಮೇಲೆ ಸಂಚಾರಿ ಪೊಲೀಸ್ ಠಾಣೆ ಗುನ್ನೇ ನಂಬರ್ 0002/2025 ನೆದರಲ್ಲಿ ಪ್ರಕರಣ ದಾಖಲಿಸಿ  ಮಾನ್ಯ ನ್ಯಾಯಲಯಕ್ಕೆ ವರದಿ ಸಲ್ಲಿಸಿದ ಮೇರೆಗೆ ಆರೋಪಿತನಾದ ವಾಹನ ಮಾಲೀಕರಾದ ತಿಮ್ಮಣ್ಣನಿಗೆ ಮಾನ್ಯ ಪ್ರಧಾನ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಶ್ರೀ ನಾಗೇಶ್ ಪಾಟೀಲ್ ರವರು 26,000ಗಳ ದಂಡ ವಿಧಿಸಿ ಇನ್ನೊಮ್ಮೆ ಪುನರಾವರ್ತನೆ ಆದಲ್ಲಿ 50,000 ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ.

Advertisement Image

WhatsApp Icon
Subscribe My YouTube