ಕೃಷಿ ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

15/11/2025 11:42 AM Total Views: 95105

Gouse Dafedar

 

ಕೃಷಿ ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

 

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ : ಮೊದಲೊಂದು ಕಾಲವಿತ್ತು ಜನ ಸಾಮಾನ್ಯರು ಸಾಲ ತೆಗೆದುಕೊಳ್ಳಲು ಬ್ಯಾಂಕ್ ಮ್ಯಾನೇಜರಗೆ ಅಥವಾ ಸಿಬ್ಬಂದಿಯವರಿಗೆ ಹೋಗಿ ವಿಚಾರಿಸಬೇಕೆಂದರೆ ಹೆದರಿಕೆ ಅಂಜಿಕೆ – ಒಂದು ವೇಳೆ ಗಟ್ಟಿ ದೈರ್ಯ ಮಾಡಿ ಸಾಲ ಕೇಳಿದರು ಹಾರಿಕೆ ಉತ್ತರಕೊಟ್ಟು ಕಠಿಣ ದಾಖಲಾತಿಗಳನ್ನು ಕೇಳಿ ಬಡವರಿಗೆ. ಶ್ರಮಿಕರಿಗೆ. ಬೀದಿ ಬದಿ ವ್ಯಾಪಾರಸ್ಥರಿಗೆ ರೈತರಿಗೆ ಸಾಲಗಳು ನೀಡುತ್ತಿರಲಿಲ್ಲ ಕೇವಲ ಶ್ರೀಮತರಿಗೆ ಇಂಡಸ್ಟ್ರಲಿಸ್ಟ್ ಗಳಿಗೆ ಮಾತ್ರ ಸಾಲ ವಿತರೆಣೆ ಮಾಡುತ್ತಿದ್ದರು.

Advertisement Image

oplus_0

ನಿನ್ನೆ ಶುಕ್ರವಾರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ರೈತ ಸಾಲ ಸಂಪರ್ಕ ಕಾರ್ಯಕ್ರಮವನ್ನು ನಗರದ ಎಸ್ ಎಸ್ ಎಲ್ ಆರ್ ಹೋಟೆಲ್ ನಲ್ಲಿ ಬ್ಯಾಂಕಿನ ಗ್ರಾಹಕರಿಗೆ ಸಾಲದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಪ್ರಧಾನ ಮಂತ್ರಿ ಖಾತರಿ ಯೋಜನೆ 

 

 

 

ಈ ಸಂದರ್ಭದಲ್ಲಿ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ರವರು ಮಾತನಾಡಿ ತಮ್ಮ ಬ್ಯಾಂಕಿನಲ್ಲಿ ಮಹಿಳೆಯರಿಗೆ. ವ್ಯಾಪಾರಸ್ಥರಿಗೆ. ಬೀದಿ ವ್ಯಾಪಾರಸ್ಥರಿಗೆ. ಮಹಿಳಾ ಸಂಘದ ಸದಸ್ಯರಿಗೆ ರೈತರಿಗೆ ಅನುಕೂಲವಾಗುವ ಹಾಗೂ ಇತರೆ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಕಡಿಮೆ ದಾಖಲಾತಿಗಳ ಮುಖಾಂತರ ವಿತರಿಸುವ ಬಗ್ಗೆ ಮಾಹಿತಿ ನೀಡಿದರು.

ನಗರಸಭೆ ಗಂಗಾವತಿಯ ಡೇ ನೆಲ್ಮ ವಿಭಾಗದ ಶ್ರೀಮತಿ ವಿಜಯಲಕ್ಷ್ಮೀಯವರು ಮಾತನಾಡಿ ಮಹಿಳೆಯರಿಗೆ ಯಾವ ಬ್ಯಾಂಕಿನವರು ಸಾಲ ಕೊಡುತ್ತಿರಲಿಲ್ಲ ಆದರೆ ಇವತ್ತು ಸ್ವತಃ ಬ್ಯಾಂಕಿನವರು ಮಹಿಳೆಯರಿಗೆ ಸಾಲ ತೆಗೆದುಕೊಂಡು ಹೋಗಲು ಈ ತರಹದ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿದೆ ಆದರೆ ಮಹಿಳೆಯರು ಈ ದುಡ್ಡನ್ನು ಸ್ವಾವಲಂಬಿಯಾಗಿ ದುಡಿದರೆ ಮಹಿಳೆಯರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಸಾಲದ ದುಡ್ಡನ್ನು ಬೇರೆ ರೀತಿಯಲ್ಲಿ ದುರ್ಬಳಕೆ ಮಾಡಿ ಕೊಂಡರೆ ಸಾಲ ತೀರಿಸಲು ಕಷ್ಟವಾಗುತ್ತದೆ ಎಂದು ಹೇಳಿದರು.

ನಂತರ ಕೊಪ್ಪಳ ಲೀಡ್ ಬ್ಯಾಂಕಿನ ಮ್ಯಾನೇಜರ್ ಮಾರುತಿಯವರು ಮಾತನಾಡಿ ಸೆಂಟ್ರಲ್ ಬ್ಯಾಂಕ್ ನವರು ತಮ್ಮ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ಲೋನ್ ಗಳನ್ನು ಕೊಡುತ್ತಿರುವ ಬಗ್ಗೆ ಜನರಲ್ಲಿ ಲೋನ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನಿಜವಾಗಲು ತುಂಬಾ ಪ್ರಶಂಸೆಯ ಮಾತಾಗಿದೆ ಎಂದು ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಶಂಸಿದರು.

ಕೊನೆಯಲ್ಲಿ ಸೆಂಟ್ರಲ್ ಬ್ಯಾಂಕ್ ವತಿಯಿಂದ ಮಾತನಾಡಿದ ಅಧಿಕಾರಿಯೊಬ್ಬರು ಕೇಂದ್ರ ಸರಕಾರದಿಂದ ಜನರಿಗೆ ಅನುಕೂಲವಾಗುವ ಬಹಳಷ್ಟು ಸಾಲದ ಯೋಜನೆಗಳಿವೆ ಆದರೆ ಅದು ಜನರಿಗೆ ತಲುಪುತ್ತಿಲ್ಲ ಹಾಗಾಗಿ ನಾವು ನಮ್ಮ ಬ್ಯಾಂಕಿನ ಮುಖಾಂತರ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಮತ್ತು ಪ್ರದಾನ ಮಂತ್ರಿಯವರು ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ಹಣದಲ್ಲಿ ಇನ್ಸೂರೆನ್ಸ್ ಸ್ಥಾಪಿಸಿದ್ದಾರೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ತಿಳಿಸಿದರು ನಂತರ ಮಹಿಳಾ ಸಂಘದ ಸದಸ್ಯರಿಗೆ ಸಾಲದ ಚೆಕ್ ಗಳನ್ನು ವಿತರಿಸಿದರು.

 

WhatsApp Icon
Subscribe My YouTube