ತಹಶೀಲ್ದಾರ್ ಗೈರು: ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಸೂಚನೆ ವಾರಂಟ್ ಜಾರಿ..!

08/11/2025 9:23 AM Total Views: 95107

Gouse Dafedar

ತಹಶೀಲ್ದಾರ್ ಗೈರು: ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಸೂಚನೆ ವಾರಂಟ್ ಜಾರಿ..!

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಕುಣಿಗಲ್: ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಸಮಗ್ರ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕುಣಿಗಲ್ ಪೊಲೀಸ್ ಇನ್ಸ್‌ಪೆಕ್ಟರ್‌ ಅವರಿಗೆ ವರದಿ ಸಮೇತ ತಹಶೀಲ್ದಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

 

ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಗೋಮಾಳ ಜಾಗ ಅತಿಕ್ರಮವಾಗಿದೆ ಎಂದು ಗ್ರಾಮಸ್ಥರೊಬ್ಬರು 2023ರಲ್ಲಿ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸದರಿ ಗೋಮಾಳ ಜಮೀನಿನ ಪ್ರಸ್ತುತ ಸ್ಥಿತಿಯ ವರದಿ ನೀಡುವಂತೆ ತಹಶೀಲ್ದಾರ್ ಅವರಿಗೆ ಹಲವು ಬಾರಿ ಸೂಚನೆ ನೀಡಿತ್ತು. ಆದರೆ ತಹಶೀಲ್ದಾರ್ ಯಾವುದೇ ವರದಿ ನೀಡದ ಹಿನ್ನೆಲೆಯಲ್ಲಿ ಪ್ರಕರಣವನ್ನು ನವೆಂಬರ್ 11ಕ್ಕೆ ವಿಚಾರಣೆ ಕೈಗೊಂಡಿರುವ ನ್ಯಾಯಾಲಯವು ಕುಣಿಗಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಅವರಿಗೆ ತಹಶೀಲ್ದಾರ್ ಅವರು 25,000 ಮೊತ್ತದ ಜಾಮೀನು ಸಹಿತ ದಸ್ತಗಿರಿ ವಾರೆಂಟ್ ಬರೆದುಕೊಟ್ಟು, ಜಮೀನಿನ ಪ್ರಸ್ತುತ ವರದಿಯೊಂದಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದೆ.

Advertisement Image

WhatsApp Icon
Subscribe My YouTube