ನವಂಬರ್ 2 ಕ್ಕೆ ಗಂಗಾವತಿ ನಗರಸಭೆ ಸದಸ್ಯರುಗಳ ಅವಧಿ ಮುಕ್ತಾಯ.

29/10/2025 6:45 PM Total Views: 95125

Gouse Dafedar

ನವಂಬರ್ 2 ಕ್ಕೆ ಗಂಗಾವತಿ ನಗರಸಭೆ ಸದಸ್ಯರುಗಳ ಅವಧಿ ಮುಕ್ತಾಯ 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ : ನಗರಸಭೆ ಸದಸ್ಯರುಗಳ ಅವಧಿ ವಿಸ್ತರಣೆ ಮತ್ತು ಅಧ್ಯಕ್ಷರುಗಳ ಪಟ್ಟಾಭಿಷೇಕಕ್ಕೆ ಕನಸು ಕಾಣುತ್ತಿರುವವರಿಗೆ ರಾಜ್ಯ ಚುನಾವಣಾ ಆಯೋಗ ಬರೆ ಎಳೆಯಳಿದೆ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ನಗರಸಭೆ ಸದಸ್ಯರುಗಳು ಅಧ್ಯಕ್ಷರುಗಳ 2ನೇ ಅವಧಿ ಮುಕ್ತಾಯವಾಗದ ಕಾರಣ ನಾವು ಇನ್ನೂ ಹದಿನಾರು ತಿಂಗಳು ಮುಂದುವರೆಯಬೇಕೆಂದು ನಗರಸಭೆ ಸದಸ್ಯರುಗಳು ಕೋರ್ಟ್ ನ ಮೊರೆ ಹೋಗಿದ್ದರು.

ಅಕ್ಟೋಬರ್ 14ನೇ ತಾರೀಖಿಗೆ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ ಸದಸ್ಯರುಗಳಿಗೆ ನವಂಬರ್ 10 ರಂದು ದಿನಾಂಕ ನಿಗದಿ ಪಡಿಸಿದ ನ್ಯಾಯಾಲಯವು 2ನೇ ಅವಧಿಗೆ ಅಧ್ಯಕ್ಷರಾಗಲು ವಿಳಂಬವಾದ ಬಗ್ಗೆ ಸ್ಪಷ್ಟೀಕರಣ ಕೇಳಿದೆ ಒಂದು ವೇಳೆ ನಗರಸಭೆ ಸದಸ್ಯರುಗಳು ಸಲ್ಲಿಸುವ ಸ್ಪಷ್ಟೀಕರಣವು ಮುನಿಸಿಪಲ್ ಆಕ್ಟ್ ಒಳಗಡೆ ಬರುವುದಾದರೆ ಸದಸ್ಯರುಗಳಿಗೆ ರಿಲೀಫ್ ಸಿಗಲಿದೆ ಇಲ್ಲವಾದಲ್ಲಿ ಕನಸು ಕಾಣುತ್ತಿರುವ ಸದಸ್ಯರುಗಳಿಗೆ ಮುಖಭಂಗವಾಗಲಿದೆ.

Advertisement Image

ರಾಜ್ಯ ಚುನಾವಣಾ ಆಯೋಗ ಸ್ಪಷ್ಟವಾಗಿ ಲಿಖಿತ ಪತ್ರದೊಂದಿಗೆ ತಿಳಿಸಿದ ಪ್ರಕಾರ ಮೊದಲ ಬಾರಿ ಅಧ್ಯಕ್ಷರು ಅಲಂಕರಿಸಿದ ದಿನಾಂಕದಿಂದ ಐದು ವರ್ಷ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಂದ ಹಾಗೆ ನಗರಸಭೆ ಸದಸ್ಯರುಗಳ ಅವಧಿ ಇನ್ನೂ ಕೇವಲ 5 ದಿನಗಳು ಮಾತ್ರ ಉಳಿದಿದೆ.

1 ನವಂಬರ್ 2025 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ನವಂಬರ್ 2 ರಂದು ಅವಧಿಯಿಂದ ಕೆಳಗೆ ಇಳಿದರು ಆಚಾರ್ಯ ಪಡಬೇಕಿಲ್ಲ…

 

WhatsApp Icon
Subscribe My YouTube