08/10/2025 4:49 PM Total Views: 95162

ವೆಂಕಟೇಶ್ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಭೀಮ ಅಲಿಯಾಸ್ ಭರತ್,
ಸಲೀಂ,
ವಿಜಯ್,
ಧನರಾಜ್ ಈ ನಾಲ್ವರು ಕಂಪ್ಲಿ ಪೊಲೀಸರಿಗೆ ತಾವಾಗಿಯೇ
ಶರಣಾಗಿದ್ದು ಇನ್ನಿಬ್ಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಗಂಗಾವತಿ ಪೊಲೀಸರು ಶರಣಾದ ಆರೋಪಿಗಳನ್ನು ಕಂಪ್ಲಿ ಠಾಣೆಯಿಂದ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸ್ ತನಿಖೆಯ ಪ್ರಕಾರ, ಈ ಕೊಲೆಯ ಹಿಂದೆ ಇಸ್ಪೀಟ್ ದಂಧೆಗೆ ಸಂಬಂಧಿಸಿ 2 ವರ್ಷಗಳ ಹಿಂದೆ ಎರಡು ಗುಂಪುಗಳ ನಡುವಿನ ಕೋಲ್ಡ್ ವಾರ್ ಕಾರಣವಿರಬಹುದೆಂದು ಶಂಕಿಸಲಾಗಿದೆ. ಗಂಗಾವತಿಯಲ್ಲಿ ರವಿ ಮತ್ತು ವೆಂಕಟೇಶ್ ಗುಂಪುಗಳ ನಡುವೆ ತಿಕ್ಕಾಟ ನಡೆಯುತ್ತಿದ್ದು, ಈ ಘರ್ಷಣೆ ವೆಂಕಟೇಶ್ ಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ತಿಳಿದಿದ್ದಾರೆ.
ಕುಟುಂಬದ ಆಕ್ರಂದನ
ಈ ಘಟನೆಯಿಂದ ವೆಂಕಟೇಶ್‌ರ ಕುಟುಂಬ ಆಘಾತಕ್ಕೊಳಗಾಗಿದೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ತಂದೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ಮಗನನ್ನು ಕೊಲೆ ಮಾಡಿದ ಆರೋಪಿಗಳನ್ನು ನಮ್ಮ ವಶಕ್ಕೆ ಒಪ್ಪಿಸಿ ಬಿಡಿ ಎಂದು ತಮ್ಮ ನೋವನ್ನು ಹೊರಹಾಕಿದರು.
ಈಘಟನೆಯಿಂದ ಗಂಗಾವತಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಈ ದ್ವೇಷ ಇನ್ನೂ ಎಷ್ಟು ಜನರನ್ನು ಬಲಿ ತಗೆದು ಕೊಳ್ಳುತ್ತದೆಯೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
















