08/10/2025 9:24 AM Total Views: 85651

ಗಂಗಾವತಿಯಲ್ಲಿ ಹಿಂದೂ ಕಾರ್ಯಕರ್ತನ ಭೀಕರ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಗಂಗಾವತಿ : ಮುರಾಹರಿ ನಗರದ ನಿವಾಸಿ ವೆಂಕಟೇಶ್ ಕುರುಬರ ಎಂಬಾತ ಕೊಲೆಯಾದ ದುರ್ದೈವಿ, ವೆಂಕಟೇಶ್ ಬಿಜೆಪಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷನಾಗಿದ್ದ ಕೆಲವೇ ವರ್ಷಗಳಲ್ಲಿ ಬಿರುಗಾಳಿಯಂತೆ ಬೆಳಕಿಗೆ ಬಂದ ವೆಂಕಟೇಶನನ್ನು ಕೊಲೆ ಮಾಡಿದ್ದೇಕೆ, ಕೊಲೆ ಮಾಡಲು ಕಾರಣವೇನು.?
ವೆಂಕಟೇಶ್ ಗಂಗಾವತಿಯ JNN ಎಂಬ ಚಾನಲ್ ನ ಕ್ಯಾಮರ ಮ್ಯಾನ್. ಮತ್ತು ವರದಿಗಾರನಾಗಿ ಹಲವು ವರ್ಷ ಕೆಲಸ ಮಾಡಿದ್ದ ನಂತರದ ದಿನಗಳಲ್ಲಿ ಇಸ್ಪೀಟ್ ಮಾಫಿಯಾಕ್ಕೆ ಕಾಲಿಟ್ಟಿದ್ದ ಈತ ಎಲ್ಲರ ಜೊತೆ ಹೊಂದಿಕೊಂಡು ಹೋಗುವಂತಹ ಮನೋಭಾವದ ವ್ಯಕ್ತಿಯಾಗಿದ್ದರಿಂದ ಈತನಿಗೆ ರಾಜಕೀಯ ಧುರೀಣರ ಜೊತೆ ಹಾಗು ಅಧಿಕಾರಿಗಳ ಜೊತೆ ಒಳ್ಳೆಯ ಸಂಬಂಧವನ್ನು ಬೆಳಿಸಿಕೊಂಡಿದ್ದ ಎಲ್ಲರಿಗೂ ಗೌರವ ಕೊಡುವ ವ್ಯಕ್ತಿಯಾಗಿದ್ದ ಇಸ್ಪೀಟ್ ಮಾಫಿಯಾದಲ್ಲಿ ತುಂಬಾ ಹೆಸರು ಮಾಡೋಕೆ ಶುರು ಮಾಡಿದ್ದೆ ಈತನಿಗೆ ಮುಳ್ಳಾಗಿ ಪರಿಣಮಿಸಿದೆಯೇ


ಈತನ ಹೆಸರಿನ ಮೇಲೆ ಅನೇಕ ಇಸ್ಪೀಟ್ ಗುಂಪುಗಳು ಇಸ್ಪೀಟ್ ಆಡಿಸುವುದಕ್ಕೆ ಬ್ಯಾಚ್ ಗಳನ್ನು ಕಟ್ಟಿ ಕೊಂಡಿದ್ದವು ಎನ್ನಲಾಗಿದೆ
ಗಂಗಾವತಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಗುಂಪುಗಳು ಇಸ್ಪೀಟ್ ಆಡಿಸುತ್ತಿವೆ ಎಂದು ಹೇಳಲಾಗುತ್ತಿದೆ ಗಂಗಾವತಿ ಅಲ್ಲದೆ ಸುತ್ತ ಮುತ್ತ ಜಿಲ್ಲೆಯಿಂದ ಇಸ್ಪೀಟ್ ಆಡುವುದಕ್ಕೆ ಇಸ್ಪೀಟ್ ಕ್ಲಬ್ ಗಳಿಗೆ ಮತ್ತು ಇಸ್ಪೀಟ್ ಅಡ್ಡೆಗಳಿಗೆ ಜನರು ಬರುತ್ತಿದ್ದರು. ಗಂಗಾವತಿ ಭತ್ತದ ಕಣಜ ಹೋಗಿ ಅಕ್ರಮಗಳ ತಾಣ ಎಂದೇ ಪ್ರಖ್ಯಾತಿ ಪಡೆದಿತ್ತು.
ವೆಂಕಟೇಶ್ ನಂತೆ ಇನ್ನೂ ಅನೇಕ ಯುವಕರು ಇಸ್ಪೀಟ್ ಮಾಫಿಯಾದಲ್ಲಿ ಇದ್ದಾರೆ ಅವರವರ ಬೇರೆ ಬೇರೆ ಬ್ಯಾಚಗಳೆ ಇವೆ ಹೀಗಿದ್ದಾಗ ವೆಂಕಟೇಶ್ ಬ್ಯಾಚ್ ವರ್ಸ್ಸ್ ಸ ಬೇರೆ ಬ್ಯಾಚಗಳ ಯುವಕರಿಗೆ ಮನಸ್ಥಾಪವಾಗಿ ಈ ದುರ್ಘಟನೆ ಸಂಭವಿಸಿರಬಹುದೇ ಅಥವಾ ಕಳೆದ ಎರಡೂವರೆ ವರ್ಷಗಳ ಹಿಂದೆ ಇದೇ ವೆಂಕಟೇಶನ ಸಹಚರರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಘಟನೆ ಕೂಡ ಇದೇ ಕೊಲೆ ಮಾಡೋಕೆ ಕಾರಣ ದ್ವೇಷ ಇದ್ದರೂ ಇರಬಹುದು.
ಪತ್ರಿಕೆಗಳಲ್ಲಿ ಹಲವು ಬಾರಿ ಇಸ್ಪೀಟ್. ಮಟಕ. ಮರಳು ಅನ್ನಭಾಗ್ಯದಂತಹ ಅನೇಕ ಅಕ್ರಮಗಳ ಬಗ್ಗೆ ವರದಿಯಾಗಿದ್ದು ಇದೆ. ಪೊಲೀಸರು ಮಾತ್ರ ತಮ್ಮ ಕಾರ್ಯ ನಿಷ್ಠೆಯಿಂದ ವಹಿಸುತ್ತಿದ್ದು ಅಕ್ರಮ ನಡೆಯುವಲ್ಲಿ ದಾಳಿ ಮಾಡಿದಾಗ ಪೊಲೀಸರು ಸ್ಥಳೀಯ ಮುಖಂಡರಿಂದ ಹಾಗು ರಾಜಕೀಯ ವ್ಯಕ್ತಿಗಳಿಂದ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸದೆ ಇರುವುದರಿಂದ ಇಂತಹ ಘಟನೆಗಳು ಜರುಗಬಹುದು
ಇನ್ನುಮುಂದೆ ಆದರೂ ಪೊಲೀಸ್ ಇಲಾಖೆ ಯಾರ ಒತ್ತಡಕ್ಕೂ ಮಣಿಯದೆ ಇಸ್ಪೀಟ್. ಅಕ್ರಮ ಮರಳುಗಾರಿಕೆ. ಅನ್ನಭಾಗ್ಯ. ಮಟ್ಕಾ. ಗಾಂಜಾದಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾಗಿದೆ
ಈ ಕೊಲೆಯ ಸತ್ಯಾ ಸತ್ಯತೆ ಪೊಲೀಸರ ತನಿಖೆಯ ನಂತರವೇ ಹೊರ ಬೀಳಲಿದೆ













