ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯ ಕೋರಿ ಮನವಿ ಮಾಡಿದ ಪೋಲಿಸ್.

05/10/2025 5:21 AM Total Views: 95227

Gouse Dafedar

ಪೋಲಿಸ್ ಸಿಬ್ಬಂದಿಯಿಂದ ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯ ಕೋರಿ ಮನವಿ

ಮನೆ ಮನೆಗೆ ಪೊಲೀಸ್

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ : ಸರ್ಕಾರ ಪೊಲೀಸರ ಹಾಗು ಜನರ ನಡುವೆ ಇರುವ ಭಯದವಾತಾವರಣವನ್ನು ಹೋಗಲಾಡಿಸಲು ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆ  ಕಲ್ಪಿಸಲು ಮನೆ ಮನೆಗೆ ಪೊಲೀಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರತಿ ಮನೆಗೂ ಪೊಲೀಸ್ ಸಿಬ್ಬಂದಿಯವರು ಭೇಟಿ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ,

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಜನಸ್ನೇಹಿ ಪೊಲೀಸ್ ಇದರ ಮುಖ್ಯ ಉದ್ದೇಶ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುವುದು, ಅಪರಾಧಗಳನ್ನು ತಡೆಯುವುದು, ಮತ್ತು ನಾಗರಿಕರು ಎದುರಿಸುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿದೆ. ಈ ಕಾರ್ಯಕ್ರಮದ ಮೂಲಕ ಪೊಲೀಸ್ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಸಮಾಜದಲ್ಲಿ ಭದ್ರತೆ ಮತ್ತು ನೆಮ್ಮದಿಯನ್ನು ಖಾತ್ರಿಪಡಿಸುತ್ತಾರೆ.

ಗಂಗಾವತಿ ರೂರಲ್ ಠಾಣೆಯ ಸಿಬ್ಬಂದಿ ಬಸವರಾಜ್ ಎಂಬುವವರು ಹಳೆ ಅಯೋಧ್ಯಾ ಬೀಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮನೆ ಮನೆಗೆ ಪೊಲೀಸ್ ಕಾರ್ಯ ಕ್ರಮದಡಿ ಮನೆ ಮನೆಗೆ ಭೇಟಿ ನೀಡಿ ಕುಂದು ಕೊರತೆ, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುವಾಗ ಒಬ್ಬ 20 ವರ್ಷದ ಮಹಿಳೆ ಕ್ಯಾನರ್ ಎಂಬ ಮಹಾ ಮಾರಿ ರೋಗಕ್ಕೆ ತುತ್ತಾಗಿದ್ದು ಈ ಮಹಿಳೆಗೆ ಒಬ್ಬ ಚಿಕ್ಕ ಮಗನಿದ್ದು ಈಗ ಆ ಮಹಿಳೆ ತಂದೆಯ ಮನೆಯಲ್ಲಿ ವಾಸವಾಗಿದ್ದು ತುಂಬಾ ಕಡು ಬಡವರು ಆಗಿದ್ದು ಚಿಕಿತ್ಸೆ ಮಾಡಿಸಲು ಅವರ ಬಳಿ ಹಣದ ಕೊರತೆ ಇದ್ದುದ್ದನ್ನು ಕಂಡು ಪೊಲೀಸ್ ಎಂದರೆ ಭಯ ಆದರೆ ಈ ಪೊಲೀಸರಲ್ಲೂ ಮಾನವೀಯತೆ ಮನಸ್ಸುಳ್ಳವರು ಇರುತ್ತಾರೆ ಎಂಬುದು ಸಾಬೀತು ಮಾಡಿದ್ದಾರೆ, 

ಆ ಬಡ ಮಹಿಳೆಯ ಸ್ಥಿತಿಯನ್ನು ಕಂಡು ಬಸವರಾಜ್ ಎಂಬ ಪೋಲಿಸ್ ಸಿಬ್ಬಂದಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಮತ್ತೆ ತಮ್ಮ  ಫೋನ್ ಸ್ಟೇಟಸ್ ಮೂಲಕ ಜನರಲ್ಲಿ ಈ ಬಡ ಜೀವಕ್ಕೆ ಸಹಾಯ ಮಾಡಲು ಮನವಿಯನ್ನು ಮಾಡಿದ್ದಾರೆ

Advertisement Image

 

Oplus_16908288

 

ಜುಲೇಖಾ ತಂದೆ ಇಮಾಮ್ ಸಾಬ್ ವಯಸ್ಸು 20 ವರ್ಷ ಹಳೆ ಅಯೋಧ್ಯಾ ಗಂಗಾವತಿ

ಮೊಬೈಲ್ ಸಂಖ್ಯೆ ಫೊನ್ ಪೇ: 8792734233

ಅಕೌಂಟ್ ನಂಬರ್ : 18022240013246

IFSC CODE CNRB0000547

 

ಕಾರ್ಯಕ್ರಮದ ಮುಖ್ಯ ಉದ್ದೇಶಗಳು:

ಸಾರ್ವಜನಿಕರ ವಿಶ್ವಾಸ ಹೆಚ್ಚಿಸುವುದು: ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ಉತ್ತಮ ಸಂಬಂಧವನ್ನು ಬೆಳೆಸುವುದು.

ಅಪರಾಧ ತಡೆಗಟ್ಟುವಿಕೆ: ಸಂಭಾವ್ಯ ಅಪಾಯಗಳನ್ನು ಗುರುತಿಸಿ, ಅಪರಾಧಗಳು ಸಂಭವಿಸುವುದಕ್ಕೂ ಮುನ್ನ ಕ್ರಮ ಕೈಗೊಳ್ಳುವುದು.

ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದು: ಸಂಚಾರ ನಿಯಮಗಳು, ಆಸ್ತಿ ವಿವಾದಗಳು ಮುಂತಾದ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಒದಗಿಸುವುದು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯಾಗಿ ಮತ್ತು ಸಮಾಜಕ್ಕೆ ಅಗತ್ಯವಿರುವ ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುವುದು.

ಕಾರ್ಯಕ್ರಮ ಹೇಗೆ ಕಾರ್ಯನಿರ್ವಹಿಸುತ್ತದೆ:

ಮನೆಗಳಿಗೆ ಭೇಟಿ: ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಪ್ರದೇಶದ ಮನೆಗಳಿಗೆ ಭೇಟಿ ನೀಡುತ್ತಾರೆ.

ಸಂವಹನ ಮತ್ತು ಸಮಸ್ಯೆಗಳ ಅರಿವು: ಮನೆಗಳಲ್ಲಿರುವವರೊಂದಿಗೆ ಸಂವಹನ ನಡೆಸುವ ಮೂಲಕ ಅವರ ಸಮಸ್ಯೆಗಳು ಮತ್ತು ಆತಂಕಗಳನ್ನು ಆಲಿಸುತ್ತಾರೆ.

ಸಾರ್ವಜನಿಕರ ಸಹಕಾರ: ನಾಗರಿಕರು ತಮ್ಮ ಸಮಸ್ಯೆಗಳು, ಕಾನೂನು ಬಾಹಿರ ಚಟುವಟಿಕೆಗಳು, ಡ್ರಗ್ಸ್ ಬಳಕೆ ಮುಂತಾದ ವಿಷಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಹಂಚಿಕೊಳ್ಳಬಹುದು.

ಮಾಹಿತಿ ಸಂಗ್ರಹಣೆ ಮತ್ತು ಡಿಜಿಟಲೀಕರಣ: ಮನೆಗಳ ಬಗ್ಗೆ ಮತ್ತು ನಿವಾಸಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದನ್ನು ಡಿಜಿಟಲೀಕರಿಸಿ, ಪೊಲೀಸ್ ಮೇಲ್ವಿಚಾರಣೆಗಾಗಿ ಬಳಸಿಕೊಳ್ಳಲಾಗುತ್ತದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಗೃಹ ಸಚಿವಾಲಯದ ವತಿಯಿಂದ ರಾಜ್ಯಾದ್ಯಂತ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದು ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದಿರುವ ವಿನೂತನ ಕಾರ್ಯಕ್ರಮವಾಗಿದ್ದು, ರಾಜ್ಯದ ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

 

WhatsApp Icon
Subscribe My YouTube