06/09/2025 8:16 PM Total Views: 95219

ಅಕ್ರಮ ಮರಂ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಶಂಕರ ಸಿದ್ದಾಪುರ ವಕೀಲರು ಒತ್ತಾಯ
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಗಂಗಾವತಿ: ತಾಲ್ಲೂಕಿನ ವೆಂಕಟಗಿರಿ ಹೋಬಳಿ ವಿಠಾಲಪುರ ಗ್ರಾಮದ ಗೋಪಾಲಕೃಷ್ಣ ತಂ. ಶ್ರೀನಿವಾಸ್ ಹಾಗೂ ಇವರ ಕುಟುಂಬದವರು ಜಮೀನು ಸರ್ವೆ ನಂ.೨೯/೨/೧ ವಿ: ೦೧-೩೬ ಗುಂಟೆಯಲ್ಲಿ ಫಲವತ್ತಾದ ಸಮತಟ್ಟಾದ ಭೂಮಿಯ ಪಕ್ಕದಲ್ಲಿ ಕಾಯ್ದಿಟ್ಟ ಅರಣ್ಯ ಹಾಗೂ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮ ಮರಂ ಗಣಿಗಾರಿಕೆ ಮಾಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಂಡು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಶಂಕರ್ ಸಿದ್ದಾಪುರ ವಕೀಲರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಶನಿವಾರದಂದು ಒತ್ತಾಯಿಸಿ ದೂರು ಸಲ್ಲಿಸಿದ್ದಾರೆ.
ಒತ್ತುವರಿ ಭೂಮಿ ವ್ಯಾಪ್ತಿಯಲ್ಲಿ ವನ್ಯಜೀವಿಗಳು ವಾಸಿಸುತ್ತಿದ್ದು, ಅವುಗಳ ಜೀವಕ್ಕೆ ಅಪಾಯ ಉಂಟಾಗುವ ಸಂಭವವಿದೆ. ವಿಠಾಲಪುರ ಗ್ರಾಮದ ಗೋಪಾಲಕೃಷ್ಣ ತಂ. ಶ್ರೀನಿವಾಸ್ ಹಾಗೂ ಇವರ ಕುಟುಂಬದವರು ಸ.ನಂ. ೨೯/೨/೧ ವಿ: ೦೧-೩೬ ಗುಂಟೆ ಜಮೀನಿನಲ್ಲಿ ಸಂಬAಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ವೆಂಕಟಗಿರಿ ಹಾಗೂ ಕಂದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕೆಲವು ಅಕ್ರಮ ದಂಧೆಕೊರರು ಅನುಮತಿ ಪಡೆದಿದ್ದಾರೆ. ಇದನ್ನು ತಡೆಹಿಡಿದು ವ್ಯನ್ಯಜೀವಿಗಳು ಮತ್ತು ಪರಿಸರದ ಸಂಪತ್ತನ್ನು ಕಾಪಾಡುವುದರ ಜೊತೆಗೆ ಫಲವತ್ತಾದ ಸಮತಟ್ಟಾದ ಭೂಮಿಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ಮಾಡುವುದನ್ನು ತಡೆಹಿಡಿಯಬೇಕು. ಕೆಲವು ದಲ್ಲಾಳಿಗಳ ಮೂಲಕ ಜಮೀನು ಮಾಲೀಕರಿಗೆ ಹಣದ ಆಮಿಷ ತೋರಿಸಿ ಫಲವತ್ತತೆ ಮತ್ತು ಸಮತಟ್ಟತೆ ಜಮೀನನ್ನು ಹಾಳು ಮಾಡಲು ಹೊರಟಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಗಣಿ ಮತ್ತು ಬಂಡೆಗಳು ಹೊಂದಿರುವ ಜಮೀನುಗಳನ್ನು ಕೃಷಿ ಜಮೀನನ್ನಾಗಿ ಸಮತಟ್ಟು ಮಾಡಲು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳ ಪ್ರಕಾರ ೧೯೯೪ ತಿದ್ದುಪಡಿ ನಿಯಾಮವಾಳಿ ೨೦೨೩ರ ನಿಯಮ ೩ಎ(ಎ)(೪) ಅನ್ವಯ ಅಧಿನಿಯಮವು ತಿಳಿಸುತ್ತದೆ. ಆದರೆ ಯಾವುದೇ ಖಾಸಗಿ ಜಮೀನಾಗಲಿ ಅಥವಾ ಸರ್ಕಾರಿ ಕೃಷಿ ಜಮೀನಾಗಲಿ ಸಂಬAಧಪಟ್ಟ ಇಲಾಖೆಯವರು ಪರವಾನಿಗೆ ನೀಡುವ ಸಂದರ್ಭದಲ್ಲಿ ಮರಂ ಮತ್ತು ಮಣ್ಣು ಸಾಗಾಣಿಕೆ ಸಣ್ಣ ಪ್ರಮಾಣದ ಕಲ್ಲು ಬಂಡೆಗಳನ್ನು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಂದಾಯ ಇಲಾಖೆ, ಕೃಷಿ ಇಲಾಖೆ ಪರವಾನಿಗೆ ನೀಡಲು ಅವಕಾಶವಿದೆ. ಆದರೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ಸರ್ಕಾರದ ಆದೇಶಗಳನ್ನು ಲೆಕ್ಕಿಸದೇ ಕೆಲವು ಅಕ್ರಮ ದಂಧೆಕೋರರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮತಿ ಪಡೆದಿದ್ದಾರೆ. ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಾನಿಕ ಸ್ಥಳ ಪರಿಶೀಲನೆ ಮಾಡಿ ಈ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಅವರಿಗೆ ನೀಡಿದ ಪರವಾನಿಗೆ ರದ್ದುಪಡಿಸಬೇಕು. ಒಂದು ವೇಳೆ ತಾವುಗಳು ಸ್ಥಳ ಪರಿಶೀಲನೆ ಮಾಡದೇ ನಿರ್ಲಕ್ಷ ಮಾಡಿದರೆ ಸಂಬoಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೃಷಿ ಇಲಾಖೆ (ರೈತ ಸಂಪರ್ಕ ಕೇಂದ್ರ ವೆಂಕಟಗಿರಿ) ಕಂದಾಯ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಮೂಲಕ ನಮ್ಮ ಸಂಘಟನೆಯಿoದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶಂಕರ್ ಸಿದ್ದಾಪುರ ಎಚ್ಚರಿಸಿದ್ದಾರೆ.













