16/07/2025 9:36 AM Total Views: 85649

ಶಾಲೆಯ ಸಮಯದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಸ್ವಲ್ಪರಲ್ಲೇ ಶಾಲಾ ಮಕ್ಕಳು ಬಚಾವ್ ಕಾರಿಗೆ ಡಿಕ್ಕಿ…
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ : ನಗರದ ಹಲವು ಕಡೆ ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮರಂ, ಉಸುಗೂ, ಕಂಕರ್, ಡಸ್ಟ್, ಸಾಗಿಸುತ್ತಿದ್ದು ಇದು ಅಮಾಯಕರ ಜೀವ ತಗೆಯುವುದಂತೂ ಗ್ಯಾರಂಟಿ,
ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಾಯಂಕಾಲ 3 ಗಂಟೆಯಿಂದ 6 ಗಂಟೆಯವರೆಗೆ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ – ಶಾಲೆಯಿಂದ ಮನೆಗೆ ಹೋಗುವ ಸಮಯ ಇಂತಹ ಸಮಯದಲ್ಲಿ ಪೊಲೀಸರು ಸ್ವಲ್ಪ ನಿಗಾ ವಹಿಸುವುದು ಸೂಕ್ತ ಈ ಸಮಯದಲ್ಲಿ ಮರಂ, ಉಸುಗೂ, ಕಂಕರ್, ಡಸ್ಟ್, ತುಂಬಿದ ಟ್ರ್ಯಾಕ್ಟರ್ ಗಳಿರಲಿ ಟಿಪ್ಪರ್ ಗಳಿರಲಿ ಸಾಗಿಸುವುದನ್ನು ತಡೆ ಹಿಡಿಯುವುದು ಸೂಕ್ತ ಏಕೆಂದರೆ ಇಂದು ಆದ ಘಟನೆಯಿಂದ ಜನರು ಎದೆ ಜ್ಹಲ್ ಎನ್ನುವ ದೃಶ ಕಣ್ತುಂಬಿಕೊಂಡು ನೋಡಿದ್ದಾರೆ,

ಇಂದು ಬೆಳ್ಳಂ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಕೊಪ್ಪಳ ರಸ್ತೆಯಿಂದ ಸಿ ಬಿ ಎಸ್ ಸರ್ಕಲ್ ಕಡೆ ಡಸ್ಟ್ ತುಂಬಿಕೊಂಡು ಅತೀ ವೇಗದಲ್ಲಿ ಟ್ರ್ಯಾಕ್ಟರ್ ಹೂಗುತ್ತಿರುವಾಗ ದೊಡ್ಡ ದುರ್ಘಟನೆಯೊಂದು ತಪ್ಪಿದೆ.
ಚಾಲಕನ ಅತಿವೇಗತನ ನಿರ್ಲಕ್ಷತನದಿಂದ ರೋಡಿನಲ್ಲಿ ಕುಳಿತ್ತಿದ್ದ ಹಸುವನ್ನು ನೋಡದೆ ಅತಿವೇಗದಲ್ಲಿ ಬಂದ ಟ್ರ್ಯಾಕ್ಟರ್ ಚಾಲಕ ಹಸುವನ್ನು ಉಳಿಸಲು ಹೋಗಿ ರಸ್ತೆಯ ಪಕ್ಕಕ್ಕೆ ಹೋಗುತ್ತಿರುವ ಮೂವ್ವರು ಹುಡುಗಿಯರ ಮೇಲೆ ಹೊಡೆದು ಬಿಡುತ್ತಿದ್ದ ಯಾಕೋ ಏನೂ ಆ ಹುಡುಗಿಯರು ಮಾಡಿದ ಪುಣ್ಯ ಇವತ್ತು ಅವರನ್ನು ಕಾಪಾಡಿದೆ ಆ ಹುಡುಗಿಯರು ಬಚಾವ್ ಆಗಿ ಟ್ರ್ಯಾಕ್ಟರ್ ಡೈವೈಡರ ಜಂಪ್ ಮಾಡಿ ಡಸ್ಟರ್ ಕಂಪನಿಯ ಕಾರಿಗೆ ಗುತ್ತಿದೆ ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.
ಪತ್ರಿಕೆಯಲ್ಲಿ ಸೋಷಿಯಲ್ ಮಿಡಿಯದಲ್ಲಿ ಅಕ್ರಮಗಳ ಬಗ್ಗೆ ಸದಾ ಎಚ್ಚರಿಕೆಯ ಗಂಟೆ ಬಾರಿಸಿದರು ಟಾಸ್ಕ್ ಫೋರ್ಸ್ ಸಮಿತಿ ಈ ಅಕ್ರಮಕ್ಕೆ ಅಡಿಪಾಯ ಹಾಕುತ್ತಿಲ್ಲ
ಅಧಿಕಾರಿಗಳು. ಸಂಘದವರು. ಪತ್ರಿಕೆಯವರು ಯಾವ ಸಮಯದಲ್ಲಿ ದಾಳಿ ಮಾಡ್ತಾರೋ ಅನ್ನೋ ಭಯದಲ್ಲಿ ಬೇಗ ಹೋಗಿ ಯಾರಿಗೂ ಕಣ್ಣಿಗೆ ಬೀಳದಂತೆ ಅನ್ ಲೋಡ್ ಮಾಡುವ ಉದ್ದೇಶದಿಂದ ಚಾಲಕನ ನಿಯಂತ್ರಣ ತಪ್ಪಿ ಇಂತಹ ದುರ್ಘಟನೆಗಳು ಸಂಭವಿಸುತ್ತವೆ.
ಆದ ಕಾರಣ ಎಲ್ಲಾ ವರ್ಗದ ಅಧಿಕಾರಿಗಳು ಸ್ವಲ್ಪ ಎಚ್ಚೆತ್ತು ಶಾಲಾ ಕಾಲೇಜುಗಳ ಸಮಯದಲ್ಲಿ ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಗಳಲ್ಲಿ ಉಸುಗು, ಕಂಕರ್, ಡಸ್ಟ್, ಮರಂ ತುಂಬಿ ಸಾಗಿಸುತ್ತಿರುವುದ್ದನ್ನು ತಡೆದು ಸಾರ್ವಜನಿಕರ ಮಕ್ಕಳ ಜೀವ ಕಾಪಾಡಬೇಕಿದೆ.













