13/07/2025 7:47 AM Total Views: 85653

ಗಂಗಾವತಿ : ಇಂದು ದಿನಾಂಕ 12ನೇ ಜುಲೈ 2025ರಂದು ಯುವ ವಿಜ್ಞಾನಿ ಕುಮಾರಿ ನಸೀಮ್ ಕೌಸರ್ ಇವರನ್ನು ಹುಮಾ ಶಾಲೆ ಹಾಗೂ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಪ್ರೌಢಶಾಲೆ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗ್ಗಿತ್ತು.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಕುಮಾರಿ ನಸೀಮ್ ಕೌಸರ್ ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಕೇವಲ ಮೂರೇ ವರ್ಷದಲ್ಲಿ ಪಿ ಎಚ್ ಡಿ ಮಾಡಿದ್ ಬಗ್ಗೆ ಅನುಭವ ಹಾಗೂ ಅವರ ಸಾಧನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು ಹಾಗೂ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಸ್ವಾವಲಂಬಿಯಾಗಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಕರೆ ನೀಡಿದರು ಎಲ್ಲಾ ಮಕ್ಕಳಿಗೆ ಮಾದರಿಯಾಗಿ ಸಮಾಜಕ್ಕಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳುತ್ತಾ ಮಕ್ಕಳಲ್ಲಿ ಹುರಿದುಂಬಿಸಿದರೂ
ಶಾಲಾ ಅಧ್ಯಕ್ಷರಾದ ಶಾಹೀನ್ ಕೌಸರ್ ಮಾತನಾಡಿ ಇಂತಹ ಪ್ರತಿಭೆ ಉಳ್ಳ ವಿಜ್ಞಾನಿಗಳು ನಮ್ಮ ಗಂಗಾವತಿಯಲ್ಲಿದ್ದಾರೆ ಇದು ನಮ್ಮ ಗಂಗಾವತಿಗೆ ಹೆಮ್ಮೆಯ ವಿಷಯವಾಗಿದ್ದು ಮುಂದೆ ಇವರಿಗೆ ಉತ್ತಮ ಹಾಗೂ ನೋಬೆಲ್ ಪುರಸ್ಕಾರ ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾದ ಶಾಹಿನ್ ಕೌಸರ್ ಆಡಳಿತ ಸಮಿತಿ ಸದಸ್ಯರಾದ ಜುನೈದ್ ಅಖ್ತರ್, ಸೈಫ್ ಆಫ್ರೀನ್ ಕೌಸರ್, ಹಾಗೂ ವಿಭಾಗದ ಮುಖ್ಯಸ್ಥರಾದ ರೆಹಮತ್, ವಿಮಲಾಕ್ಷಿ , ಚಂದ್ರಿಕಾ,ಕಾವ್ಯ ಇನ್ನಿತರರಿದ್ದರು.















