12/07/2025 5:23 PM Total Views: 48228

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಕೆಸರು ಓಟ ಶಾಲಾ ಮಕ್ಕಳಲ್ಲಿ ಕೃಷಿಯನ್ನು ಪರಿಚಯಿಸುತ್ತದೆ.
ಕೆಸರು ಓಟ ಸ್ಪರ್ಧೆ ಆಗಿ ಮಾರ್ಪಟ್ಟಿದೆ: ನೇತ್ರಾಜ್ ಗುರುವಿನ್‌ಮಠ
ಗಂಗಾವತಿ: ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಕೆಸರು ಓಟ ಸ್ಪರ್ಧೆಯ (ಕ್ರೀಡೆ) ಕಾರ್ಯಕ್ರಮವನ್ನು ಶನಿವಾರದಂದು ಶಾಲೆಯ ಮಕ್ಕಳಿಂದ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳು ಸಂತೋಷ ಮತ್ತು ಉತ್ಸಹ ಭರಿತವಾಗಿ ಕೆಸರು ಗದ್ದೆಯ ಓಟದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ಮಾತನಾಡಿ “ಕೆಸರು ಓಟ” ಅಂದರೆ ಮಣ್ಣಿನಲ್ಲಿ ಅಥವಾ ಕೆಸರಿನಲ್ಲಿ ಓಡುವುದು. ಸಾಮಾನ್ಯವಾಗಿ ಇದು ಒಂದು ಆಟ ಅಥವಾ ಸ್ಪರ್ಧೆಯಾಗಿರುತ್ತದೆ, ಜೊತೆಗೆ ಕೃಷಿಯನ್ನು ಪರಿಚಯಿಸುತ್ತದೆ. ಇದು ಒಂದು ಸ್ಪರ್ಧೆ (ಕ್ರೀಡೆ)ಯಾಗಿ ಮಾರ್ಪಟ್ಟಿದೆ. ಉದಾಹರಣೆ ಎಂಬoತೆ ಕೊಡಗು ಭಾಗದಲ್ಲಿ ಜನರು ಕೆಸರಿನಲ್ಲಿ ಓಡಿ ಸ್ಪರ್ಧಿಸುತ್ತಾರೆ. ಕೆಲವೊಮ್ಮೆ ಇದನ್ನು “ಮಡ್ ರನ್” ಎಂದು ಕೂಡ ಕರೆಯುತ್ತಾರೆ. ಈ ಸ್ಪರ್ಧೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ ಮತ್ತು ವಿವಿಧ ರೀತಿಯ ಸ್ಪರ್ಧೆಗಳನ್ನು ಒಳಗೊಂಡಿರುತ್ತವೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಮಾತನಾಡಿ ಮಕ್ಕಳಲ್ಲಿ ಕೇವಲ ಶೈಕ್ಷಣಿಕ ಪ್ರಗತಿಯನ್ನು ಅಪೇಕ್ಷಿಸದೆ ಮಕ್ಕಳನ್ನು ಕೆಸರು ಓಟದಂತಹ ಚಿಕ್ಕಚಿಕ್ಕ ದೈಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದರೆ ಮಕ್ಕಳು ಸರ್ವತೋಮುಖ ಅಭಿವೃದ್ಧಿ ಆಗುತ್ತಾರೆ. ಇಂತಹ ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟಂತಹ ಪಾಲಕರು ಮಕ್ಕಳಿಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು, ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
