10/07/2025 7:45 PM Total Views: 48105


ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲೇ 485 ಟನ್ ಅನ್ನಭಾಗ್ಯದ ಅಕ್ರಮ ದಾಸ್ತಾನು ಜಪ್ತಿ ರೈಸ್ ಮಿಲ್ ಸೀಜ್…
ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಲೋಕುರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ಆಗ್ರೋ ಪ್ರೊಸೆಸಿಂಗ್ ಪ್ರೈ ಲಿ ಎಂಬ ಮಿಲ್ಲಿನಲ್ಲಿ ಶೇಖರಿಸಿ ಇಟ್ಟಿದ್ದ 485 ಟನ್ ಅನ್ನಭಾಗ್ಯ ಅಕ್ಕಿಯನ್ನು (ಅಂದಾಜು 1.10 ಕೋಟಿ ರೂಪಾಯಿಗಳು) ಆಹಾರ ಮತ್ತು ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾದ ಅವಿನಾಶ್ ಎಂ ಬೆಲ್ಲದರವರ ಮಾರ್ಗದರ್ಶನದಲ್ಲಿ ಆಹಾರ ನಿರೀಕ್ಷಕರಾದ ಸಂಗಮೇಶ್ ರವರು ದಾಳಿ ಮಾಡಿ ಜಪ್ತಿ ಮಾಡಿರುತ್ತಾರೆ,
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಅಧಿಕಾರಿಗಳಿಗೆ ರಾಜಕೀಯ ಒತ್ತಡ
ಜೂಲೈ 04 ರಂದು ಈ ಘಟನೆ ನಡೆದಿದ್ದು ಇಂದು ಗುರುವಾರ 6 ದಿನಗಳ ನಂತರ ಪಂಚನಾಮೆಯಾಗಿದೆ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಇರುವುದರಿಂದ ಪ್ರಕರಣ ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡ ಬೇಕಾಗಿದೆ,
ಬೆಳಗಾವಿ ಜಿಲ್ಲೆಯ ಮನೆ ಮಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಇಂತಹದೊಂದು ದೊಡ್ಡ ಅಕ್ರಮ ಜಾಲ ಪತ್ತೆಯಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಕಾಗವಾಡ ಶಾಸಕರಾದ ಭರ್ಮಗೌಡ ಆಲಗೌಡ ಕಾಗೆ ಇವರೆ ಈ ಅಕ್ರಮದ ಹೊಣೆ ಹೊರಬೇಕಾಗಿದೆ,
ಸರಕಾರ ವಿವಿಧ ಯೋಜನೆಗಳಿಂದ ಪೂರೈಸಿದ FRK ಮಾದರಿಯ ಅನ್ನಭಾಗ್ಯದ ಅಕ್ಕಿಯನ್ನು ಕರ್ನಾಟಕದ ಇತರೆ ಜಿಲ್ಲೆಗಳಿಂದ ಕಾಳ ಸಂತೆಯಲ್ಲಿ ತರಿಸಿಕೊಂಡು ಶ್ರೀ ಬನಶಂಕರಿ ಆಗ್ರೋ ಪ್ರೊಸೆಸಿಂಗ್ ಪ್ರೈ ಲಿ ಮಿಲಿನಲ್ಲಿ ಪಾಲೀಶ್ ಮಾಡಿ ಗೋವಾ ಮತ್ತು ಮಹಾರಾಷ್ಟ್ರ ಹಾಗೂ ಇನ್ನಿತರ ಹೊರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ,
ಆಹಾರ ಇಲಾಖೆಯ ಸಿಬ್ಬಂದಿಗಳು ಪರಿಶೀಲಿಸಿದಾಗ ಬಾಲಾಜಿ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಸೋನಾ ಮಸೂರಿ ಅಕ್ಕಿಎಂದು ಬಿಲ್ಲುಗಳು ದೊರೆತಿರುವ ಬಗ್ಗೆ ಎಫ್ ಐ ಆರ್ ನಲ್ಲಿ ದಾಖಲಿಸಿದ್ದಾರೆ,
ದಾಳಿ ಕುರಿತು ಮಾಹಿತಿ ನೀಡದ ಅಧಿಕಾರಿಗಳು
ದಾಳಿ ಕುರಿತಂತೆ ಫೋಟೋ ಮತ್ತು ಮಾಹಿತಿಯನ್ನು ಪತ್ರಕರ್ತರಿಗೆ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಅಂದರೆ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಎಷ್ಟರ ಮಟ್ಟಿಗೆ ಇರಬಹುದು ಎಂದು ಸಮಾಜವೇ ಊಹಿಸಬೇಕಾಗಿದೆ,
