21 ಎಕರೆ ಗಾಯರಾಣ ಭೂ21 ಎಕರೆ ಗಾಯರಾಣ ಭೂಮಿ ವರ್ಗಾವಣೆ 7 ಜನ ಮತ್ತು ಅಧಿಕಾರಿಗಳ ವಿರುದ್ಧ ಕಂದಾಯ ಸಚಿವರಿಗೆ ದೂರು ಕೊಟ್ಟ ಮಚ್ಚಿ ಗಣೇಶ್…

25/04/2025 12:32 PM Total Views: 95235

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

21 ಎಕರೆ ಜಮೀನಿಗೆ ಏಳು ಜನ ಕೊಟ್ಟಿ ಫಲಾನುಭವಿಗಳು…!

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

: ಸೂಕ್ತ ತನಿಖೆಗೆ ಆಗ್ರಹಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಗಣೇಶ್ ಮಚ್ಚಿ ರಾಜ್ಯಾಧ್ಯಕ್ಷರು ಜನ ಜಾಗೃತಿ ಸಮಿತಿಯಿಂದ ದೂರು :

 

ಗಂಗಾವತಿ: ಕಂದಾಯ ಸಚಿವರಿಗೆ ಕೊಪ್ಪಳ ಉಪ ವಿಭಾಗ ಅಧಿಕಾರಿಗಳ ಮೇಲೆ ಹಾಗೂ ಗಂಗಾವತಿಯ ತಹಸಿಲ್ದಾರ್ ವಿರುದ್ಧ ಮತ್ತು ವೆಂಕಟಗಿರಿ ಕಂದಾಯ ನಿರೀಕ್ಷಕರ ಮೇಲೆ ದೂರು ಸಲ್ಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಗಣೇಶ್ ಮಚ್ಚಿ ಮನವಿ ಪತ್ರವನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕೊಪ್ಪಳ ಉಪವಿಭಾಗಾಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದೆಂದು ಭರವಸೆ ನೀಡಿದರು.

Advertisement Image

ಗಂಗಾವತಿ ತಹಸಿಲ್ದಾರ್ ವ್ಯಾಪ್ತಿಯಲ್ಲಿ ಬರುವ 7 ಜನರು ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿ ಪಹಣಿ ಪತ್ರಿಕೆಯಲ್ಲಿ ತಮ್ಮ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದ ನಂತರ ಅಂದಿನ ಸಮಯದಲ್ಲಿ ಭೂಮಿ ಕೇಂದ್ರದ ಕಂಪ್ಯೂಟರ್ ಆಪರೇಟರ್,  ಶೀರಸ್ತೆದಾರ ಹಾಗೂ ತಹಶೀಲ್ದಾರ ಪಹಣಿ ಪತ್ರಿಕೆಯಲ್ಲಿ ಹೆಸರು ಸೇರಿಸಿರುತ್ತಾರೆ. ಸಾಗುವಳಿ ಚೀಟಿಗೆ ಸಂಬಂಧಿಸಿದ ಕಡತಗಳು ತಹಶೀಲ್ದಾರ ಕಾರ್ಯಾಲಯದಲ್ಲಿ  ಇರುತ್ತವೆ, ಆದರೆ ಅಧಿಕಾರಿಗಳು ಸಾಗುವಳಿ ಚೀಟಿ ಅಸಲಿಯೋ ಅಥವ ನಕಲಿಯೋ ಎಂಬುದನ್ನು ಪರಿಶೀಲಿಸದೆ 7 ಜನರ ಹೆಸರಿಗೆ ಖಾತೆ ತಯಾರಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ವರ್ಗಾವಣೆ ಮಂಜೂರು ಮಾಡಿದ ಕಾರಣ ಸದರಿಯವರ ಹೆಸರುಗಳು ಪಹಣಿ ಪತ್ರಿಕೆಯಲ್ಲಿ ಬಂದಿರುತ್ತವೆ.

7 ಜನರು ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಬರಲಿಲ್ಲವೆ? ಅಥವಾ ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿದವರ ಜೊತೆ ಇವರು ಸೇರಿದ್ದಾರೆಯೇ ಎಂಬುದು ಅನುಮಾನಕ್ಕೆ ಅಸ್ಪದ ಮಾಡಿ ಕೊಡುತ್ತಿದೆ.

ದೇವಾನಂದ ದಾಸನಾಳ ಎಂಬುವರು ಉಪ ವಿಭಾಗಾಧಿಕಾರಿಗಳು ಕೊಪ್ಪಳ ಇವರಿಗೆ ದೂರು ಸಲ್ಲಿಸಿ ಮೇಲ್ಕಂಡ 7 ಜನರು ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿ ಗಾಯರಾಣ  ಜಮೀನು ಕಬಳಿಸಿದ ಬಗ್ಗೆ ದೂರು ಸಲ್ಲಿಸಿದ್ದು, ಇರುತ್ತದೆ ಇದಕ್ಕೆ ಉತ್ತರವಾಗಿ ತಹಶೀಲ್ದಾರ ನಾಗರಾಜ ವರದಿ ಸಲ್ಲಿಸಿರುತ್ತಾರೆ ಅದರಲ್ಲಿ ಕೊಟ್ಟಿ ಸಾಗುವಳಿ ಚೀಟಿಯ ಬಗ್ಗೆ ಪರಿಶೀಲನೆ ಮಾಡದೆ ವರದಿ ಸಲ್ಲಿಸಿರುತ್ತಾರೆ.

ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು  ಕಂದಾಯ ಸಚಿವರಿಗೆ ದೂರನ್ನು ಸಲ್ಲಿಸಿ ತನಿಖೆ ಮಾಡಿ  ಸೂಕ್ತ ಕ್ರಮ ಕೈಗೊಳ್ಳಲು ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಗಣೇಶ್ ಮಚ್ಚಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ.

ಕ್ಯಾಪ್ಟನ್ ಮಹೇಶಕುಮಾರ ಎಸ್. ಮಾಲಗಿತ್ತಿ ಕ.ಆ.ಸೇ ಉಪ- ವಿಭಾಗಾಧಿಕಾರಿಗಳು ಯು.ನಾಗರಾಜ ತಹಶೀಲ್ದಾರ ಮತ್ತು ಮಹೇಶ ದಲಾಲ ಕಂದಾಯ ನಿರೀಕ್ಷಕರು ವೆಂಕಟಗಿರಿ ಹಾಗೂ ಈ ಪ್ರಕರಣದಲ್ಲಿ ಬಾಗಿಯಾಗಿರುವ ಹಿಂದಿನ ಅಧಿಕಾರಿಗಳ ವಿರುದ್ಧ ಮತ್ತು ಕೊಟ್ಟಿ ಫಲಾನುಭವಿಗಳಾದ ಕನಕಮ್ಮ ಗಂಡ ದೇವೆಂದ್ರಪ್ಪ
ಸರ್ವೆ ನಂಬರ್ 72 ವಿ: 1-00,
ಮಹ್ಮದ್ ಯೂಸೂಫ್ ತಂದೆ ಅಲ್ಲಾದ್ದೀನ್. ಸರ್ವೆ ನಂಬರ್ 72*/* ವಿ : 4-00, ಹುಲಿಗೇಮ್ಮ ಗಂಡ ಸುಂದ್ರೇಶ, ಸರ್ವೆ ನಂಬರ್ 72 /*/* ವಿ : 4-00, ಹನುಮ್ಮಮ ಗಂಡ ಸಣ್ಣೆಪ್ಪ ಸರ್ವೇ ನಂಬರ್ 72/3 ವಿ: 3-00, ದೇವಮ್ಮ ಗಂಡ ಶಂಕ್ರಪ್ಪ ಸರ್ವೆ ನಂಬರ್ 72/3 ವಿ: 3-00, ಪುಷ್ಪವತಿ ಗಂಡ ಚೆನ್ನಪ್ಪ ಸರ್ವೆ ನಂಬರ್ 72/3 ವಿ: 3-00, ರೇಣುಕಾ ಗಂಡ ಚೆನ್ನಪ್ಪ ಸರ್ವೆ ನಂಬರ್ 72/3 ವಿ : 3-00 ಒಟ್ಟು ಭೂಮಿ 21 ಎಕರೆ
ಈ ಮೇಲ್ಕಾಣಿಸಿದ 7 ಜನರು
2010-11 ರಲ್ಲಿ ಕೊಟ್ಟಿ ಸಾಗುವಳಿ ಚೀಟಿಯನ್ನು ತಯಾರಿಸಿಕೊಂಡು ತಮ್ಮ ಹೆಸರಿನಲ್ಲಿ ಪಹಣಿ ಮಾಡಿಸಿ ಕೊಂಡಿರುತ್ತಾರೆ ಹಾಗಾಗಿ ಇವರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜನ ಜಾಗೃತಿ ಸಮಿತಿ,ರಾಜ್ಯ ಕಾರ್ಯದರ್ಶಿ ಸಂತೋಷ ಆಲ್ಕೋಡ ಒತ್ತಾಯಿಸಿದ್ದಾರೆ.

 

WhatsApp Icon
Subscribe My YouTube