ಇ-ಆಸ್ತಿ ತಂತ್ರಾಶದ ಮೂಲಕ ಒಂದೇ ದಿನದಲ್ಲಿ ಫಾರಂ-3 ವಿತರಣೆ ಮಾಡಿದ ಶಾಸಕರು,

29/11/2024 5:47 PM Total Views: 35783

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

 

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಇ-ಆಸ್ತಿ ತಂತ್ರಾಶದ ಮೂಲಕ ಒಂದೇ ದಿನದಲ್ಲಿ ಫಾರಂ-3 ವಿತರಣೆ ಮಾಡಿದ ಶಾಸಕರು

 

ಗಂಗಾವತಿ: ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು
ಗಂಗಾವತಿ ನಗರಸಭೆಯಿಂದ ಪೌರಾಯುಕ್ತರಾದ ಆರ್ ವಿರುಪಾಕ್ಷಿ ಮೂರ್ತಿ ಅವರು ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ-3ನ್ನು ವಿತರಿಸಲು ಶಿಬಿರಗಳನ್ನು ಈಗಾಗಲೇ ಚಾಲನೆ ನೀಡಿದ್ದರು.

Advertisement Image

 

ಇಂದು ಬೆಳಿಗ್ಗೆ ನಗರಸಭೆಯಿಂದ ಮಹಾರಾಣಾ ಪ್ರತಾಪ ಸರ್ಕಲ್ ಬಳಿ ಹಮ್ಮಿ ಕೊಂಡಿದ್ದ ಫಾರಂ ನಂಬರ್ 3 ವಿತರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಯವರು ಆಗಮಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಗರಸಭೆ ಸಿಬ್ಬಂದಿಗಳ ಹಾಗು ಪೌರಾಯುಕ್ತರ ನೇತೃತ್ವದಲ್ಲಿ ಈ ತಂತ್ರಾಂಶದ ಮೂಲಕ ಒಂದೇ ದಿನದಲ್ಲಿ ನಮೂನೆ 3 ನ್ನು (ಫಾರಂ ನಂಬರ್ 3) ವಿತರಣೆ ಮಾಡಿದರು,

ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಅಲಿಖಾನ್ ಹಾಗು ಯಮನೂರ ಚೌಡ್ಕಿ ನಗರಸಭೆಯ ಪೌರಾಯುಕ್ತರಾದ ಆರ್ ವಿರೂಪಾಕ್ಷಿ ಮೂರ್ತಿ, ನಗರಸಭೆ ಅಧ್ಯಕ್ಷರಾದ ಮೌಲಾಸಾಬ ದಾದೇಸಾಬ್, ಉಪಾಧಕ್ಷೆ ಶ್ರೀಮತಿ ಪಾರ್ವತಮ್ಮ ದುರುಗೇಶ್ ದೊಡ್ಡಮನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಚೌಡ್ಕಿ, ಹಾಗು ನಗರಸಭೆ ಸದಸ್ಯರು ಮತ್ತು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

 

WhatsApp Icon
Our YouTube Channel