05/11/2024 9:38 AM Total Views: 35787
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಮಾದಿಗ ಸಮಾಜದಿಂದ ನಗರಸಭೆ ಅಧ್ಯಕ್ಷರಿಗೆ ಸನ್ಮಾನ
ಗಂಗಾವತಿ : ಬೈಪಾಸ್ ರಸ್ತೆಯಲ್ಲಿ ಬರುವ ಮಾದಿಗ ಸಮುದಾಯದ ರುದ್ರಭೂಮಿಯಲ್ಲಿ ಗಿಡ ಕಂಟೆಗಳು ಬೆಳೆದು ಹಲವು ವರ್ಷಗಳೇ ಕಳೆದಿದ್ದವು, ಮಾದಿಗ ಸಮಾಜದಿಂದ ಹಲವು ಬಾರಿ ರುದ್ರಭೂಮಿಯಲ್ಲಿ ಬೆಳೆದಿರುವ ಗಿಡ ಜಾಲಿಯನ್ನು ಕಿತ್ತೊಗೆಯಲು ಸಾಕಷ್ಟು ಬಾರಿ ಮನವಿ ಕೂಡ ಮಾಡಲಾಗಿತ್ತು.
ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೌಲಾಸಾಬ ದಾದೆಸಾಬ್ ರವರು ಮಾದಿಗ ಸಮಾಜದ ಮನವಿಯನ್ನು ಅರಿತು ಹಿರಿಯ ಇಂಜಿನಿಯರ್ ಶಂಕರಗೌಡ ಮತ್ತು ಕಿರಿಯ ಇಂಜಿನಿಯರ್ ಶಿವುಕುಮಾರ ರವರ ಜೊತೆ ರುದ್ರಭೂಮಿಗೆ ಹೋಗಿ ರುದ್ರ ಭೂಮಿಯಲ್ಲಿ ಆಗುತ್ತಿರುವ ತೊಂದರೆಯನ್ನು ವೀಕ್ಷಿಸಿ ತಕ್ಷಣ ಜೇಸಿಬಿಯನ್ನು ತರಿಸಿಕೊಂಡು ಮಾದಿಗ ಸಮುದಾಯದ ಮುಖಂಡರ ಹಾಗು ನಗರಸಭೆ ಸದಸ್ಯರ ನೇತೃತ್ವದಲ್ಲಿ ರುದ್ರ ಭೂಮಿಯನ್ನೂ ಸ್ವಚಗೊಳಿಸಿದ್ದರು.
ನಿನ್ನೆ ಸೋಮವಾರ ಶ್ರೀ ಆದಿ ಜಾಂಬವ ಮಾದಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಾಗು ಮಾದಿಗ ಸಮುದಾಯದ ಮುಖಂಡರುಗಳು ಸೇರಿಕೊಂಡು ನಗರಸಭೆ ಅಧ್ಯಕ್ಷರಾದ ಮೌಲಾಸಾಬ ದಾದೇಸಾಬ್ ರವರಿಗೆ ಸನ್ಮಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅಲ್ಲಿ ನೀರಿನ ಕೊರತೆ ಇದ್ದು ನೀರಿನ ವ್ಯವಸ್ಥೆಯನ್ನೂ ಮಾಡಿಕೊಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಶ್ರೀ ಆದಿ ಜಾಂಬವ ಮಾದಿಗ ಸಮಾಜ ಸೇವಾ ಟ್ರಸ್ಟ್ ನ
ಅಧ್ಯಕ್ಷರಾದ ಕೆ. ದುರುಗಪ್ಪ,
ಉಪಾಧ್ಯಕ್ಷರಾದ ಜಿ ಅಶೋಕ್,
ಖಜಾಂಚಿ ಯು ಹನುಮಂತಪ್ಪ, ಹಾಗು
ನಗರಸಭೆ ಸದಸ್ಯರಾದ ಸೋಮನಾಥ ಭಂಡಾರಿ,
ಮತ್ತು ಅಶೋಕ ಕಟ್ಟಿಮನಿ, ನಾಗರಾಜ ಕಂಪ್ಲಿ, ರಾಮಣ್ಣ ಅಯೋಧ್ಯ, ರಾಮಣ್ಣ ಕನಕಗಿರಿ, ಆಶೋಕ ಎಸ್ ಕೆ ಮತ್ತಿತರರು ಉಪಸ್ಥಿತರಿದ್ದರು,