12/10/2024 4:50 PM Total Views: 40234

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
⚠️🚫 ತುಂಗಭದ್ರಾ ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ ಕಂಪ್ಲಿ ಸೇತುವೆ ಮತ್ತೆ ಮುಳುಗಡೆ ಸಾಧ್ಯತೆ…🚫⚠️
ಹೊಸಪೇಟೆ : ತುಂಗಾ, ಭದ್ರಾ ಮತ್ತು ವರದಾ ನದಿಗಳ ಹೊರಹರಿವು ಮತ್ತು ಟಿಬಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದನ್ನು ಪರಿಗಣಿಸಿ ತುಂಗಭದ್ರಾ ಅಣೆಕಟ್ಟೆಗೆ ಒಳಹರಿವು ಹೆಚ್ಚುತ್ತಿದ್ದು
ಇಂದು ಸಂಜೆ 5.00 ಗಂಟೆಯ ನಂತರ 80,000 ರಿಂದ 1,00,000 ಕ್ಯೂಸೆಕ್ ನದಿಗೆ ನೀರು ಬಿಡುಗಡೆ ಮಾಡಲಾಗುವುದು ಮತ್ತು ಒಳಹರಿವಿನ ಆಧಾರದ ಮೇಲೆ ನದಿಗೆ ನೀರು ಬಿಡುವ ಪ್ರಮಾಣವನ್ನು ಹೆಚ್ಚಿಸಲಾಗುವುದು, ಆದ್ದರಿಂದ ನದಿಯ ಅಕ್ಕ ಪಕ್ಕದ ಜನರು ಎಚ್ಚರಿಕೆಯಿಂದ ಇರಬೇಕು ಇಲ್ಲ ನದಿಯ ಅಕ್ಕ ಪಕ್ಕ ವಾಸಿಸುವ ಜನರು ಅಲ್ಲಿಂದ ಬೇರೆ ಕಡೆ ಸ್ಥಳಾಂತರಗೊಳ್ಳಬೇಕು ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಧಿಕಾರಿಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ,
ಈ ಹಿಂದೆ ತುಂಗಾಭದ್ರಾ ಅಣೆಕಟ್ಟಿನ ಗೇಟ್ ಮುರಿದು ಹೋಗಿದ್ದರಿಂದ ಸಾಕಷ್ಟು ನೀರು ಪೋಲಾಗಿತ್ತು ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು ಆದರೆ ಮಳೆರಾಯನ ಕೃಪೆಯಿಂದ ಈಗ ಮತ್ತೆ ತುಂಗಾಭದ್ರಾ ಡ್ಯಾಂ ಭರ್ತಿಯಾಗಿದ್ದು ರೈತರ ಮೊಗದಲ್ಲಿ ನಗೆ ಬೀರಿದೆ.
🚨🚨🚨🚨🚨🚨🚨🚨🚨🚨🚨🚨🚨🚨🚨
