ತಮ್ಮ ಬಣದ ಹಾಗು ಅನ್ಸಾರಿ ಬಾಣದ ಎದುರು ಮಂಡಿಯೂರಿದ ಗದ್ವಾಲ್ ಖಾಸಿಂಸಾಬ್ / ಮೌಲಾಸಾಬ್ ಗೆ ಅಧ್ಯಕ್ಷ ಪಟ್ಟ…

26/08/2024 4:53 PM Total Views: 95177

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಂತ್ರಕ್ಕೆ ರಣತಂತ್ರ ಎಸೆದ ಅನ್ಸಾರಿ…

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮ್ಮೆಲ್ಲರ ತಾಯಿ ಎಂದು ಒಗ್ಗಟ್ಟು ಪ್ರದರ್ಶಿಸಿದ ಶಾಸಕ ಗಾಲಿ ಜನಾರ್ದನ ರೆಡ್ಡಿ…

 

 

Advertisement Image

 

ಗಂಗಾವತಿ : ಇಲ್ಲಿನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ,

 

 

ಈ ಹಿಂದೆ ಕಾಂಗ್ರೆಸ್ ನಲ್ಲಿ ಗದ್ವಾಲ್ ಖಾಸಿಂ ಸಾಬ್ ಬಣ ಹಾಗು ಶಾಮೀದ ಮನಿಯಾರ್ ಬಣದಲ್ಲಿ ಗುರುತಿಸಿ ಕೊಂಡಿದ್ದ ನಗರಸಭೆ ಸದಸ್ಯರುಗಳು ಎಂ ಎಲ್ ಎ ಎಲೆಕ್ಷನ್ ನಲ್ಲಿ ಗಾಲಿ ಜನಾರ್ದನ ರೆಡ್ಡಿ ಬಣಕ್ಕೆ ಸೇರಿ ಕೊಂಡಿದ್ದರು,

ಇಕ್ಬಾಲ್ ಅನ್ಸಾರಿಯವರು ಎಷ್ಟು ಪ್ರಯತ್ನ ಪಟ್ಟರೂ ಮರಳಿ ಬಂದಿರಲಿಲ್ಲ ಅನ್ಸಾರಿ ರಾಜನಿಗೆ ಬಿರ್ಬಲ್ ಎಂದೇ ಪ್ರಖ್ಯಾತ ಪಡೆದವರಿಂದ ಕಳೆದ ಎಂ ಎಲ್ ಎ ಎಲೆಕ್ಷನ್ ನಲ್ಲಿ ಅನ್ಸಾರಿ ಬೆನ್ನಿಗೆ ಚೂರಿ ಹಾಕಿದ ಘಟನೆ ಬಗ್ಗೆ ಈಗಾಗಲೇ ಇಡೀ ಕೊಪ್ಪಳ ಜಿಲ್ಲೆಗೆ ಗೊತ್ತಿರುವ ವಿಷಯವಾಗಿದೆ,

ಗದ್ವಾಲ್ ಖಾಸಿಂ ಸಾಬ್ ಬಣದಲ್ಲಿ ಗುರುತಿಸಿಕೊಂಡಿದ್ದ ನಗರಸಭೆ ಸದಸ್ಯರಲ್ಲಿ ಒಬ್ಬರಾದ ಮೌಲಾಸಾಬ್ ಮುದ್ಗಲ್ ಇವರನ್ನು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ಬಿಜೆಪಿಯಿಂದ ಕಣಕ್ಕಿಳಿಸಿದಿದ್ದಾರೆ,  ಶಾಮೀದ ಮನಿಯಾರ್ ಬಣದ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ, ಎಂದು ಗೊತ್ತಾದ ಅನ್ಸಾರಿ ಇದೆ ಸೂಕ್ತ ಸಮಯ ಎಂದು ಗದ್ವಾಲ್ ಖಾಸಿಂ ಸಾಬ್ ಮತ್ತು ಮನಿಯರ್  ಬಣದ ಎದುರು ಅನ್ಸಾರಿಯವರು ಗದ್ವಾಲ್ ಖಾಸೀಂಸಾಬ್ ಇವರಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಮುಜುಗರಕ್ಕೆ ಒಳ ಪಡಿಸಿದ್ದಾರೆ,

 

 

ಆದರೆ ಸೇಡಿಗೆ ಸೇಡು ತೀರಿಸಿಕೊಳ್ಳುವಲ್ಲಿ ಹೆಸರುವಾಸಿಯಾದ ಇಕ್ಬಾಲ್ ಅನ್ಸಾರಿ  ಸೋಲು ಗೊತ್ತಿದ್ದರೂ ಗದ್ವಾಲ್ ಖಾಸಿಂ ಇವರನ್ನೇ ಕಣಕ್ಕೆ ಇಳಿಸಿ ಅವರ ಬಣದ ಸದಸ್ಯರಗಳ ಎದುರೆ ಅವರ ಶಿಷ್ಯಂದಿರಗಳ ಎದುರೆ ಗದ್ವಾಲ್ ಖಾಸಿಂ ಸಾಬ್ ಇವರಿಗೆ ಸೋಲಿಸಿ ಮುಖಭಂಗ ಮಾಡಿದ್ದಾರೆ,

 

ಗಂಗಾವತಿಯಲ್ಲಿ ಈಗ ಇಕ್ಬಾಲ್ ಅನ್ಸಾರಿಯವರ ಆಟ ಮುಗಿತು ಎಂದು ಕೊಂಡಿದ್ದವರಿಗೆ ಇದೊಂದು ಮುನ್ಸುಚನೆಯಾಗಿದೆ ಏಕೆಂದರೆ ಇಕ್ಬಾಲ್ ಅನ್ಸಾರಿ ಇಂದು ಆಟ ಪ್ರಾರಂಭಿಸಿದ್ದು ನೋಡಿದರೆ ಅವರಿಗೆ ಸೆಡ್ಡು ಹೊಡೆದು ಬೆನ್ನಿಗೆ ಚೂರಿ ಹಾಕಿದವರಿಗೆ ಮುಂದಾದರು ಕಷ್ಟ ತಪ್ಪಿದ್ದಲ್ಲ ಎಂದು ಎದ್ದು ಕಾಣುತ್ತಿದೆ,

 

 

ಬಿಜೆಪಿಯಲ್ಲಿ ಮುಸ್ಲಿಮರಿಗೆ ಮನ್ನಣೆ ಇಲ್ಲದಿದ್ದರೂ ಗಾಲಿ ಜನಾರ್ದನ ರೆಡ್ಡಿಯವರು ಬಳ್ಳಾರಿಯಲ್ಲಿ ಸಾಕಷ್ಟು ಮುಸ್ಲಿಂ ಅಭ್ಯರ್ಥಿಗಳನ್ನು ಮಹಾನಗರ ಪಾಲಿಕೆಯಲ್ಲಿ ನಿಲ್ಲಿಸಿ ಗೆಲ್ಲಿಸಿ ಅವರಿಗೆ ಸೂಕ್ತ ಸ್ಥಾನ ಮಾನ ಕೊಡಿಸಿದ್ದರು, ಅದರಂತೆ ಗಂಗಾವತಿಯ ಎಂ ಎಲ್ ಎ ಎಲೆಕ್ಷನ್ ಪೂರ್ವದಲ್ಲಿ ಅಲ್ಪ ಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರಲ್ಲಿ ಯಾರಿಗಾದರೂ ನಗರಸಭೆ ಅಧ್ಯಕ್ಷನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದ ಗಾಲಿ ಜನಾರ್ದನ ರೆಡ್ಡಿಯವರು ಇಂದು ಮೂಲ ಬಿಜೆಪಿ ಸದಸ್ಯರನ್ನು ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿಯವರನ್ನು ಹಾಗು ಪಕ್ಷದ ಮುಖಂಡರನ್ನು ಮನವೊಲಿಸಿ ತಾವು ಕೊಟ್ಟಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ,

ಅಧ್ಯಕ್ಷ ಪಟ್ಟ ಮೌಲಸಾಬ್ ಇವರ ಮಡಿಲಿಗೆ ಏರಿಸಿ ಮುಸ್ಲಿಂ ಸಮುದಾಯದ ಪರ ಶಾಸಕರು ಇದ್ದಾರೆ ಎಂಬುದನ್ನು ಮತ್ತೊಮ್ಮೆ ಜನಾರ್ದನ್ ರೆಡ್ಡಿ ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮ್ಮೆಲ್ಲರ ತಾಯಿ ಎಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ,

 

WhatsApp Icon
Subscribe My YouTube