20/08/2024 9:37 AM Total Views: 36614
ನಗರಸಭೆ ಅಧ್ಯಕ್ಷ ಸ್ಥಾನ ಮುಸ್ಲಿಂ ಸಮುದಾಯದ ಸದಸ್ಯರಿಗೆ ನೇಮಕ ಮಾಡಲು ಸೈಯದ್ ಮೀರಾ ಒತ್ತಾಯ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಗಂಗಾವತಿ : ಬಹು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ, ಅದರಲ್ಲೂ ದುಡ್ಡಿದ್ದವರೆ ಅಧ್ಯಕ್ಷ ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಪಿಸು ಮಾತುಗಳು ನಡೆಯುತ್ತಿವೆ,
ಬಹಳ ವರ್ಷದ ನಂತರ ಅಧ್ಯಕ್ಷ ಸ್ಥಾನಕ್ಕೆ ಬಿಸಿಎ ಮೀಸಲಾತಿ ಬಂದಿದ್ದರಿಂದ ಶಾಸಕರಾದ ಗಾಲಿ ಜನಾರ್ಧನ್ ರೆಡ್ಡಿಯವರು ಈ ಸಲ ಅಧ್ಯಕ್ಷ ಸ್ಥಾನಕ್ಕೇ ಮುಸ್ಲಿಂ ಸಮುದಾಯದ ಸದಸ್ಯರಿಗೆ ಮೊದಲ ಆದ್ಯತೆ ಕೊಡಬೇಕೆಂದು ಅಲ್ಪ ಸಂಖ್ಯಾತ ಸಮುದಾಯದ ಯುವ ಮುಖಂಡ ಸೈಯದ್ ಮೀರಾ ಮನವಿ ಮಾಡಿ ಕೊಂಡಿದ್ದಾರೆ
ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಾಲಿ ಜನಾರ್ಧನ್ ರೆಡ್ಡಿಯವರು ಅಲ್ಪಸಂಖ್ಯಾತರಿಗೆ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿ ಗಾಲಿ ಜನಾರ್ಧನ್ ರೆಡ್ಡಿಯವರ ಪರವಾಗಿ ಕೆಲಸ ಮಾಡಿದ್ದಾರೆ ಅದೇ ರೀತಿ ಗಾಲಿ ಜನಾರ್ದನ ರೆಡ್ಡಿಯವರು ಸಹ ಅಲ್ಪ ಸಂಖ್ಯಾತರಿಗೆ ಬಹಳಷ್ಟು ರೀತಿಯಲ್ಲಿ ಸಾಥ್ ನೀಡುತ್ತೇನೆಂದು ಸಹ ಭರವಸೆಯು ನೀಡಿದ್ದು ಅಲ್ಪಸಂಖ್ಯಾತರು ನಿಮ್ಮ ಮೇಲೆ ಇಟ್ಟ ಭರವಸೆಯಂತೆ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯದ ಸದಸ್ಯರಿಗೆ ನೀಡಬೇಕೆಂದು ಅಲ್ಪ ಸಂಖ್ಯಾತ ಸಮುದಾಯದ ಯುವ ಮುಖಂಡ ಸೈಯದ್ ಮೀರಾ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿ ಕೊಂಡಿರುತ್ತಾರೆ.