25/07/2024 4:02 PM Total Views: 111986

Gouse Dafedar
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ವಿಜಯಪುರ: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ನೀಡಲು ಆರೋಪಿಗಳಿಂದ 40 ಸಾವಿರ ಲಂಚ ತೆಗೆದುಕೊಳ್ಳುವಾಗ ವಿಜಯಪುರ ನಗರದ ಗೋಳಗುಮ್ಮಟ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ
Read Our Photo Story
ಪೊಲೀಸ್ ಕಾನ್‌ಸ್ಟೆಬಲ್ ಹನುಮಂತ ಪೂಜಾರಿ ಮತ್ತು ಜಟ್ಟೆಪ್ಪ ಬಿರಾದಾರ ಎಂಬುವವರು ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಲು 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿದ ವಿಜಯಪುರ ಲೋಕಾಯುಕ್ತ ಎಸ್.ಪಿ ಟಿ.ಮಲ್ಲೇಶ, ಡಿವೈಎಸ್‌ಪಿ ಸುರೇಶ ರೆಡ್ಡಿ, ಇನ್‌ಸ್ಪೆಕ್ಟರ್ ಆನಂದ ಠಕ್ಕನವರ ಮತ್ತು ಎ.ಎ ಡೋಣಿ ದಾಳಿ ನಡೆಸಿ, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿದ್ದಾರೆ,












