24/07/2024 1:12 PM Total Views: 40237

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ತುಂಗಭದ್ರಾ ಅಣೆಕಟ್ಟಿನಿಂದ ಇಂದು ಸಂಜೆ 4 ಗಂಟೆಗೆ 20 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುವ ಮೂಲಕ ಸುತ್ತ ಮುತ್ತಲಿನ ಜನರೂ ಎಚ್ಚರಿಕೆಯಿಂದಿರಬೇಕು
ಹೊಸಪೇಟೆ : ತುಂಗಾ ನದಿ ಮತ್ತು ವರದಾ ನದಿಯಿಂದ ಹೊರ ಹರಿವುಗಳನ್ನು ಪರಿಗಣಿಸಿದರೆ, ತುಂಗಭದ್ರ ಅಣೆಕಟ್ಟಿಗೆ ಒಳಹರಿವು ಹೆಚ್ಚುತ್ತಿದೆ. ಆದ್ದರಿಂದ, “ನದಿಗೆ ಹೊರಹರಿವು ಕ್ರಮೇಣ ಪ್ರಸ್ತುತ 9000 ಕ್ಯೂಸೆಕ್ ಗಳಿಂದ 20,500 ಕ್ಯುಸೆಕ್‌ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ,
ಇಂದು 24/ 07/ 2024 ಸಂಜೆ 04:00 ಗಂಟೆಗೆ ಒಟ್ಟು 10 ಗೇಟ್ ಗಳಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ ಆದ ಕಾರಣ ತುಂಗಭದ್ರಾ ನದಿಯ ಸುತ್ತ ಮುತ್ತಲಿನ ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ, ಸಂಬಂಧಿತರು ತುಂಗಭದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ಎಚ್ಚರಿಕೆಯಿಂದಿರಲು ವಿನಂತಿಸಲಾಗಿದೆ,
