12/07/2024 12:16 PM Total Views: 35797
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ನಗರಸಭೆ ಪೌರಾಯುಕ್ತರಿಗಲ್ಲದೆ ಕುಟುಂಬದವರ ಮೇಲು ಅವ್ಯಚ್ಚ ಶಬ್ದಗಳಿಂದ ನಿಂದನೆ : ಸಂದೀಪ್ ಮೇಲೆ ಪ್ರಕರಣ ದಾಖಲು ಮಾಡಿ ನಗರಸಭೆ ಸಿಬ್ಬಂದಿ ಪೌರಕಾರ್ಮಿಕರಿಂದ ಪ್ರತಿಭಟನೆ
ಗಂಗಾವತಿ : ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಡೀ ನಗರದ ಜವಾಬ್ದಾರಿ ಒಂದು ಕಡೆ ಇದ್ದರೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಇವರ ಪತಿಯ ಕಿರಿಕಿರಿ ಇನ್ನೊಂದು ಕಡೆ ಇರೋದು ಬೇಸರದ ಸಂಗತಿಯಾಗಿದೆ,
ಕೆಲವು ವರ್ಷಗಳ ಹಿಂದೆ ನಗರಸಭೆಯ ಸಿಬ್ಬಂದಿ ಸಾಧಿಕ ಇವರ ಮೇಲೆ ಸಂದೀಪ್ ಸಣ್ಣ ಸಣ್ಣ ವಿಚಾರವಾಗಿ ಮೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾದರೂ ನಗರಸಭೆ ಸದಸ್ಯರ ಹಾಗು ಇನ್ನುಳಿದ ಸಿಬ್ಬಂದಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡಿತ್ತು,
ಆದರೆ ಇತ್ತೀಚಿನ ದಿನಗಳಲ್ಲಿ ಸಂದೀಪ ಇವರ ಈ ದುರ್ನಡತೆಯನ್ನು ಬೇಸೆತ್ತ ನಗರಸಭೆ ಪೌರಾಯುಕ್ತರು ನಗರ ಸಭೆ ಸದಸ್ಯರು ಹಾಗು ಸಿಬ್ಬಂದಿಗಳು ಇರುವ ವಾಟ್ಸಾಪ್ ಗ್ರೂಪ್ ನಿಂದ ರಿಮುವ್ ಮಾಡಿದ್ದರು, ಈ ವಿಚಾರವಾಗಿ ಸಂದೀಪ್ ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ನಗರಸಭೆ ಎನ್ನುವ ಇನ್ನೊಂದು ವಾಟ್ಸಾಪ್ ಗ್ರೂಪನಲ್ಲಿ ವಾಯ್ಸ್ ಮೆಸೇಜ್ ಮಾಡಿದ್ದು ಆ ವಾಯ್ಸ್ ಮೆಸೇಜ್ ನಲ್ಲಿ ಪೌರಾಯುಕ್ತರಿಗೆ ಹಾಗು ಅವರ ಕುಟುಂಬದ ಹೆಂಗಸರ ಮೇಲೆ ಥರ್ಡ್ ಕ್ಲಾಸ್ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳವನ್ನು ಕೊಟ್ಟಿರುತ್ತಾನೆ,
ಈ ವಿಚಾರವಾಗಿ ಇಂದು ಬೆಳಿಗ್ಗೆ ಪೌರಕಾರ್ಮಿಕರ ಅಧ್ಯಕ್ಷರಾದ ವಹೀದ್ ಖಾನ್ ಖಂಡಿಸಿ ಪೌರ ಕಾರ್ಮಿಕರನ್ನು ಕರೆದುಕೊಂಡು ಧಿಡೀರ್ ಪ್ರತಿಭಟನೆಗೆ ಇಳಿದರು,
ವಾಯ್ಸ್ ರೆಕಾರ್ಡಿಂಗ್ ನಲ್ಲಿ ಇರುವ ಸಂಭಾಷಣೆ ಕೇಳುವವರಿಗೂ ಅಸಹ್ಯ ಪಡುವಂತಾದ್ದರಿಂದ ಮನನೊಂದ ನಗರಸಭೆ ಪೌರಾಯುಕ್ತರಿಗೆ ನಗರಸಭೆಯ ಸದಸ್ಯರು ಹಾಗು ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಬೆಂಬಲವನ್ನು ಸೂಚಿಸಿ ಸಂದೀಪ ಇವರ ಭಂಧನ ಆಗುವ ವರೆಗೂ ಯಾವ ಒಬ್ಬ ಪೌರ ಕಾರ್ಮಿಕನಾಗಲಿ ಸಿಬ್ಬಂದಿಗಳಾಗಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಧಿಡೀರ್ ಪ್ರತಿಭಟನೆ ಮಾಡಿದರು,