08/07/2024 8:08 AM Total Views: 48121

ಬೆಂಗಳೂರು : ಟೊಯೋಟಾ ರೂಮಿಯಾನ್ ಎಂಪಿವಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದು ಮಾರುತಿ ಸುಜುಕಿ ಎರ್ಟಿಗಾದ ರೀ-ಬ್ಯಾಡ್ಜ್ ಮಾದರಿಯಾಗಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಈ ಕಾರಿನಲ್ಲಿ 7 ಜನರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವುದರಿಂದ ಹಲವಾರು ಕುಟುಂಬಗಳ ನೆಚ್ಚಿನ ವಾಹನವಾಗಿ ಗುರ್ತಿಸಿಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಈ ಕಾರಿನ ಬೆಲೆಯು ರೂ.13.03 ಲಕ್ಷದಿಂದ ಆರಂಭವಾಗಿ ರೂ.14.20 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಟೊಯೊಟಾ ರೂಮಿಯನ್ ಎಂಪಿವಿಗೆ ಕಿಯಾ ಕ್ಯಾರೆನ್ಸ್ ಹಾಗೂ ಮಹೀಂದ್ರಾ ಮರಾಜೊ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ವೇರಿಯೆಂಟ್ ವಾರು ಬೆಲೆಗಳು: ಟೊಯೊಟಾ ರೂಮಿಯನ್ (Toyota Rumion) ಎಂಪಿವಿಯ ಪೆಟ್ರೋಲ್ ಚಾಲಿತ ರೂಪಾಂತರಗಳಾದ ‘ಎಸ್’ ರೂ.13.03 ಲಕ್ಷ, ‘ಜಿ’ ರೂ.14.46 ಲಕ್ಷ, ‘ಎಸ್ ಎಟಿ’ ರೂ.14.88 ಲಕ್ಷ, ‘ವಿ’ ರೂ.15.36 ಲಕ್ಷ, ‘ಜಿ ಎಟಿ’ ರೂ.16.19 ಲಕ್ಷ, ‘ವಿ ಎಟಿ’ ರೂ.17.09 ಲಕ್ಷ ಹಾಗೂ ‘ಎಸ್’ ಸಿಎನ್‌ಜಿ ಮಾದರಿಯು ರೂ.14.20 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ.
ನೀವು ಈ ಕಾರನ್ನು ರೂ.5 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇಕಡ 9.8% ಬಡ್ಡಿ ದರದಲ್ಲಿ ಮಾಸಿಕ ರೂ.16,974 ಇಎಂಐ (EMI) ಕಟ್ಟಬೇಕು. ಸದ್ಯ, ಮೇ ತಿಂಗಳು ಕೂಡ ರೂಮಿಯನ್ ಎಂವಿಪಿಗೆ ಭಾರೀ ಬೇಡಿಕೆಯಿದೆ. ಪೆಟ್ರೋಲ್ ಆವೃತ್ತಿಗಳು ಸುಮಾರು 3 ತಿಂಗಳ ನಂತರ ವಿತರಣೆಯಾಗುತ್ತವೆ. ಸಿಎನ್‌ಜಿ ಚಾಲಿತ ರೂಪಾಂತರವು 2 ತಿಂಗಳ ಬಳಿಕ ಖರೀದಿದಾರರ ಮನೆ ಸೇರುತ್ತದೆ.
ಸುರಕ್ಷತೆ & ವಿಶೇಷತೆಗಳು: ಈ ಕಾರಿನಲ್ಲಿ ಸುರಕ್ಷತೆಗಾಗಿ 4 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ. ಹಾಗೆಯೇ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಟೊಯೊಟಾ ರೂಮಿಯನ್ (Toyota Rumion) ಎಂಪಿವಿ, 1.5-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಅದಕ್ಕೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ (ಎಟಿ) ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಪೆಟ್ರೋಲ್ ರೂಪಾಂತರಗಳು 20.51 ಕೆಎಂಪಿಎಲ್ ವರೆಗೆ ಮತ್ತು ಸಿಎನ್‌ಜಿ ಮಾದರಿಯು 26.11 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.
ಭಾರತದಲ್ಲಿ 7-ಸೀಟರ್ ಕಾರುಗಳಿಗೆ ಭಾರೀ ಡಿಮಾಂಡ್ ಇದೆ, ಈ ವಿಭಾಗದಲ್ಲಿ ಹಲವು ಕಂಪನಿಗಳು ತಮ್ಮ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿವೆ. ಈ ವಿಭಾಗಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟ ಟೊಯೋಟಾ ರೂಮಿಯನ್ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ಕೊಡುತ್ತಿದೆ. ರೂಮಿಯಾನ್ ಎಂಪಿವಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳ ಪಾಲುದಾರಿಕೆಯ ಭಾಗವಾಗಿ ಎರ್ಟಿಗಾ ಆಧಾರಿತ ರೂಮಿಯಾನ್ ಎಂಪಿವಿಯನ್ನು 2023ರ ಆಗಸ್ಟ್ ತಿಂಗಳಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಕಾರಿಗೆ ಭಾರೀ ಡಿಮ್ಯಾಂಡ್ ಇದ್ದು, ಅಧಿಕ ಸಂಖ್ಯೆಯಲ್ಲಿ ಬಿಕರಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗ್ರಾಹಕರು, ರೂಮಿಯಾನ್ ಎಂಪಿವಿಯನ್ನು ತಮ್ಮ ಕುಟುಂಬದ ವಾಹನವಾಗಿ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.
