ವಾಹನಗಳಿಗೆ ಹೈಬೀಮ್ ಹೆಡ್‍ಲೈಟ್ ಬಳಕೆ : 239 ಪ್ರಕರಣ ದಾಖಲು,

06/07/2024 9:52 PM Total Views: 35809

Gouse Dafedar

ವಾಹನಗಳಿಗೆ ಹೈಬೀಮ್ ಹೆಡ್‍ಲೈಟ್ ಬಳಕೆ : 239 ಪ್ರಕರಣ ದಾಖಲು

ಬೆಂಗಳೂರು | ವಾಹನಗಳಿಗೆ ಹೈಬೀಮ್ ಹೆಡ್‍ಲೈಟ್ ಬಳಕೆ : 239 ಪ್ರಕರಣ ದಾಖಲು

Update: 2024-07-02 15:47 GMT

ಬೆಂಗಳೂರು : ಅನಗತ್ಯವಾಗಿ ಹೈ ಬೀಮ್ ಹೆಡ್‍ಲೈಟ್ ಉಪಯೋಗಿಸುತ್ತಿದ್ದ ವಾಹನ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಪೊಲೀಸರು, ಮೋಟಾರು ವಾಹನ ಕಾಯ್ದೆ 177ರಡಿ ಒಟ್ಟು 239 ಪ್ರಕರಣ ಪ್ರಕರಣಗಳನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಪೊಲೀಸರು ತಮ್ಮ ಕಾರ್ಯಾಚರಣೆಯ ವೇಳೆಯಲ್ಲಿ ವಾಹನ ಚಾಲಕರು, ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸುವುದರೊಂದಿಗೆ ಸಂಚಾರ ನಿಯಮಗಳ ಮಹತ್ವದ ಕುರಿತು ಅರಿವು ಮೂಡಿಸಿರುವುದಾಗಿ ಹೇಳಿದ್ದಾರೆ.

ಹೈ-ಬೀಮ್ ಹೆಡ್‍ಲೈಟ್‍ಗಳು ಸಾಮಾನ್ಯ ಹೆಡ್ ಹೆಡ್‍ಲೈಟ್‍ಗಳಿಗಿಂತಲೂ ಹೆಚ್ಚು ಪ್ರಕಾಶವಾದ ಬೆಳಕನ್ನು ಹೊರಸೂಸುತ್ತವೆ. ಅವುಗಳನ್ನು ಸೂಕ್ತವಾಗಿ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಸಂಚಾರಕ್ಕೆ ಅಡ್ಡಿಪಡಿಸಬಹುದು ಅಥವಾ ಅಪಾಯ ತಂದೊಡ್ಡುವ ಸಾಧ್ಯತೆಯಿರುತ್ತದೆ. 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನುಸಾರ ‘ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ ಮಾತ್ರ (ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಮತ್ತಿತರ ಸಂದರ್ಭಗಳಲ್ಲಿ) ಹೈ ಬೀಮ್ ಹೆಡ್ ಲೈಟ್ಸ್ ಬಳಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement Image
WhatsApp Icon
Our YouTube Channel