06/07/2024 9:05 AM Total Views: 35811
ಬೆಂಗಳೂರು: ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ 14 ಕೆಎಎಸ್ ಅಧಿಕಾರಿಗಳ (KAS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಗುರುವಾರ ಈ ಬಗ್ಗೆ ಅದಿಸೂಚನೆ ಬಿಡುಗಡೆ ಮಾಡಿದ್ದು, ತಕ್ಷಣವೇ ಜಾರಿ ಬರುವಂತೆ ವರ್ಗಾವಣೆ ಹಾಗೂ ನಿಯುಕ್ತಿಗೊಳಿಸಿ ಸರ್ಕಾರದ ಅದೀನ ಕಾರ್ಯದರ್ಶಿ ಉಮಾದೇವಿ ಸೂಚನೆ ನೀಡಿದ್ದಾರೆ. ಯಾವ ಅಧಿಕಾರಿಗಳು ಯಾವ ಇಲಾಖೆಗೆ ವರ್ಗಾವಣೆಯಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
1. ವಿಶ್ವನಾಥ ಪಿ ಹಿರೇಮಠ್, ಮುಖ್ಯ ಆಡಳಿತಾಧಿಕಾರಿ ಕೊಪ್ಪಳ ವೈಧ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ಕೆಪಿಸಿಎಲ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆಯಾಗಿದ್ದಾರೆ.
2. ರಮೇಶ್ ಕಳಸದ್, ವ್ಯವಸ್ಥಾಪಕರು ಕೃಷ್ಣಾ ಮೇಲ್ಮಂಡೆ ಯೋಜನೆ ಬಾಗಲಕೋಟೆ ಯಿಂದ ಕರ್ನಾಟಕ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿಗೆ ಮುಖ್ಯ ಆಡಳಿತಾಧಿಕಾರಿ ವರ್ಗಾವಣೆ
3. ಶ್ರೀ ಹರ್ಷ ಎಸ್ ಶೆಟ್ಟಿ, ವಿಶೇಷ ಭೂ ಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಾಗಲಕೋಟೆಯಿಂದ ವಿಶೇಷ ಜಿಲ್ಲಾಧಿಕಾರಿಯಾಗಿ (ಭೂಸ್ವಾಧೀನ) ಬೆಂಗಳೂರಿಗೆ ವರ್ಗಾವಣೆ
4. ಕೃಷ್ಣಮೂರ್ತಿ ಹೆಚ್, ಜಂಟಿ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯಿಂದ ಉಪ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ-2 ಸಚಿವಾಲಯ ಬೆಂಗಳೂರು ವರ್ಗಾವಣೆ
5. ಹೆಚ್.ಎನ್.ಶಿವೇಗೌಡ, ವಿಶೇಷ ಭೂ ಸ್ವಾಧೀನಾಧಿಕಾರಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೈಸೂರು ಇಂದ ವಿಶೇಷ ಭೂ ಸ್ವಾಧೀನಾಧಿಕಾರಿ ಕೆಐಎಡಿಬಿಗೆ ವರ್ಗವಣೆ
6. ರವಿಚಂದ್ರ ನಾಯಕ್, ವಿಶೇಷ ಭೂ ಸ್ವಾಧೀನಾಧಿಕಾರಿ ತುಂಗಾ ಮೇಲ್ಕಂಡ ಯೋಜನೆ ಶಿವಮೊಗ್ಗ ಇಂದ ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗವಣೆ
7. ಪಾರ್ವತಿ, ವಿಶೇಷ ಭೂಸ್ವಾಧೀನ ಅಧಿಕಾರಿ ಕೆಐಎಡಿಬಿ ಕಲಬುರಗಿ ಇಂದ ವಿಶೇಷ ಭೂ ಸ್ವಾಧೀನಾಧಿಕಾರಿ ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಗಳು, ಕಲಬುರ್ಗಿ ವರ್ಗವಣೆ
8. ಸಿದ್ರಾಮೇಶ್ವರ, ವೈಧ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ ಇಂದ ಅಪರ ಜಿಲ್ಲಾಧಿಕಾರಿ ಮತ್ತು ಅವರ ಜಿಲ್ಲಾ, ದಂಡಾಧಿಕಾರಿಯಾಗಿ ನೇಮಕ
9. ಡಾ ಭಾಸ್ಕರ್ ಎನ್, ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಇಂದ ಅಪರ ಜಿಲ್ಲಾಧಿಕಾರಿ ಮತ್ತು ಅವರ ಜಿಲ್ಲಾ ದಂಡಾಧಿಕಾರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ
10. ಪಿ.ಎನ್ ನಾಗಪ್ರಶಾಂತ್, ಸ್ಥಳ ನಿರೀಕ್ಷಣಾ ಅಧಿಕಾರಿ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಬೆಂಗಳೂರಿಗೆ ವರ್ಗವಣೆ
11. ವೆಂಕಟಲಕ್ಷ್ಮಿ ಹೆಚ್ ಎಸ್, ಸ್ಥಳ ನಿರೀಕ್ಷಣಾ ಅಧಿಕಾರಿ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಬೆಂಗಳೂರಿಗೆ ವರ್ಗವಣೆ
12. ಡಾ. ಬಿ ಶರಣಪ್ಪ, ಬಿಬಿಎಂಪಿ ಚುನಾವಣೆ ಸಹಾಯಕ ಆಯುಕ್ತರು ಇಂದ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ರಾಜ್ಯ ಪ್ರತಿನಿಧಿಯಾಗಿ ನೇಮಕ
13. ಮಾರುತಿ ಬ್ಯಾಕೋಡ, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ ಇಂದ ವಿಶೇಷ ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಧಾರವಾಡಕ್ಕೆ ವರ್ಗವಣೆ
14. ಕೆ ಚಂದ್ರಮೌಳಿ, ಪೌರಾಯುಕ್ತರು ನಗರ ಸಭೆ ಕಾರವಾರ ಇಂದ ವಿಶೇಷ ಭೂಸ್ವಾಧೀನಾಧಿಕಾರಿ ಹಿಡಕಲ್ ಡ್ಯಾಂ ಯೋಜನೆ ಬೆಳಗಾವಿಗೆ ವರ್ಗಾವಣೆ