ಸ್ತನ ಕ್ಯಾನ್ಸರ್ ಹಾಗೂ ಹೃದಯ ರೋಗಗಳನ್ನು ಉಚಿತ ಆರೋಗ್ಯ ಶಿಬಿರಗಳಿಂದ ನಿಯಂತ್ರಿಸಬಹುದಾಗಿದೆ: ಡಾ|| ಜಿ. ಚಂದ್ರಪ್ಪ…

17/07/2025 6:11 PM Total Views: 85643

Gouse Dafedar

 

ಸ್ತನ ಕ್ಯಾನ್ಸರ್ ಹಾಗೂ ಹೃದಯ ರೋಗಗಳನ್ನು ಉಚಿತ ಆರೋಗ್ಯ ಶಿಬಿರಗಳಿಂದ ನಿಯಂತ್ರಿಸಬಹುದಾಗಿದೆ: ಡಾ|| ಜಿ. ಚಂದ್ರಪ್ಪ

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ: ಆರೋಗ್ಯವೇ ಮಹಾ ಭಾಗ್ಯ ಎಂಬ ನಾಣ್ನುಡಿಯಂತೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ. ಇತ್ತೀಚಿಗೆ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ, ಅದೇರೀತಿ ಮಹಿಳೆಯರು ಸ್ತನಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಉಚಿತ ಆರೋಗ್ಯ ಶಿಬಿರಗಳ ಅವಶ್ಯಕತೆ ಇದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಗಂಗಾವತಿ ಹಿರಿಯ ವೈದ್ಯರು ಹಾಗೂ ಹಿರಿಯ ಲಯನ್ಸ್ ಕ್ಲಬ್ ಸದಸ್ಯರಾದ ಡಾ|| ಜಿ. ಚಂದ್ರಪ್ಪ ಅಭಿಪ್ರಾಯಪಟ್ಟರು.

ಅವರು ಜುಲೈ-೧೬ ಬುಧವಾರದಂದು ಶ್ರೀರಾಮನಗರದ ಎಕೆಆರ್‌ಡಿ ಪಿಯು ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ, ಭಾರತೀಯ ವೈದ್ಯಕೀಯ ಸಂಘ, ವೈದೇಹಿ ಆಸ್ಪತ್ರೆ ಬೆಂಗಳೂರು, ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಹೈದರಾಬಾದ್ ಹಾಗೂ ಐಎಂಎ ಮೈತ್ರಿ ಗಂಗಾವತಿ ಇವರುಗಳ ನೇತೃತ್ವದಲ್ಲಿ ಆಯೋಜಿಸಿದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಶಿಬಿರವನ್ನು ಲಯನ್ಸ್ ಕ್ಲಬ್‌ನ ಪಿ.ಎಂ.ಜೆ.ಎಫ್, ಲಯನ್ ಡಾ|| ಮಾಧವಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಹಿಂದಿನ ಅಧ್ಯಕ್ಷರಾದ ಲಯನ್ ಗಂಗಾಧರ ಅವರು ಉದ್ಘಾಟಿಸಿದರು.

Advertisement Image

ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ಆರೋಗ್ಯಕ್ಕೆ ಸಂಬAಧಿಸಿದAತೆ ರಕ್ತ ತಪಾಸಣೆ, ಬಿ.ಪಿ., ಸಕ್ಕರೆ ಕಾಯಿಲೆ ಸೇರಿದಂತೆ ದೀರ್ಘ ಅವಧಿಯ ರೋಗರುಜಿನಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅಧಿಕ ವೆಚ್ಚವಾಗಲಿದ್ದು, ಅವುಗಳಿಗೆ ಕಡಿವಾಣ ಹಾಕಲು ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಸಹಕಾರಿಯಾಗಲಿವೆ ಎಂದರು. ಈ ಶಿಬಿರದಲ್ಲಿ ಮಳೆಯ ನಡುವೆಯೂ ೮೫೦ ಕ್ಕಿಂತ ಹೆಚ್ಚಿನ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ ಕಣ್ಣಿನ ತಪಾಸಣೆ ೨೭೦, ಇಕೋ., ಇ.ಸಿ.ಜಿ ೨೫೦, ಮೆಮೋಗ್ರಾಫಿಗೆ ೬೦, ಆರ್ಥೋಪಿಡಿಕ್ ೨೫೦ ಜನರು ತಪಾಸಣೆಗೊಳಪಟ್ಟರು.ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ರೋಗಿಗಳಿಗೂ ಉಚಿತವಾಗಿ ಬಿ.ಪಿ., ಹಾಗೂ ಶುಗರ್ ತಪಾಸಣೆ ಮಾಡಲಾಗಿದೆ ಹಾಗೂ ಉಚಿತವಾಗಿ ಔಷಧಿ ವಿತರಿಸಲಾಯಿತು ಎಂದರು.

ಐ.ಎಂ ಎ ಮೈತ್ರಿ ಅಧ್ಯಕ್ಷರಾದ ಡಾ|| ಮೇಧಾ ಮಲ್ಲನಗೌಡ ಮಾತನಾಡಿ, ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ವಿಶೇಷ ಗಮನಹರಿಸಬೇಕು. ಅಂತಹ ಲಕ್ಷಣಗಳು ಕಂಡು ಬಂದಲ್ಲಿ  ಹಂತದಿಂದಲೇ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಅಧ್ಯಕ್ಷರಾದ ಲ. ಎಸ್. ಸತೀಶ್ ಅದಿಥಿಯ, ಕಾರ್ಯದರ್ಶಿಯಾದ ಆನಂದ ಎಸ್., ಖಜಾಂಚಿಯಾದ. ಸುದೇಶಕುಮಾರ, ಐ.ಎಂ.ಎ ಅಧ್ಯಕ್ಷರಾದ. ಡಾ|| ಎ.ಎಸ್.ಎನ್ ರಾಜು, ಕಾರ್ಯದರ್ಶಿಯಾದ. ಡಾ|| ನಾಗರಾಜ ಹೆಚ್., ಖಜಾಂಚಿಯಾದ ಡಾ|| ಅವಿನಾಶ್ ಪದ್ಮಶಾಲಿ, ಐ.ಎಂ.ಎ ಮೈತ್ರಿ ಕಾರ್ಯದರ್ಶಿಯದ ಡಾ|| ಅಕ್ಷತಾ ಪಟ್ಟಣಶೆಟ್ಟಿ, ಖಜಾಂಚಿಯಾದ ಶ್ರೀಮತಿ ಭಾರತಿ ಹೊಸಳ್ಳಿ, ಲಯನ್ಸ ಕ್ಲಬ್ ಹಿರಿಯ ಸದಸ್ಯರಾದ ಡಾ. ಎ. ಸೋಮರಾಜು, ಟಿ. ರಾಮಕೃಷ್ಣ, ಈರಣ್ಣ ಪತೇಪೂರ್, ಜಿ. ಹರಿಬಾಬು, ಡಾ|| ಪಂಪಾಪತಿ, ಶರಣಪ್ಪ ಬಾವಿ, ಸುಬ್ಬರಾಜು, ವೆಂಕಟೇಶ್ವರರಾವ್, ಸಿದ್ದಣ್ಣ ಜಕ್ಕಲಿ, ಶ್ರೀಮತಿ ಮಾಲತಿ ಶ್ರೀನಿವಾಸ್, ಸಿ. ರಾಮಕೃಷ್ಣ, ಸತೀಶ್, ಅಭಿಷೇಕ, ನಾಗರಾಜ ಗುತ್ತೇದಾರ, ಶ್ರೀರಾಮನಗರ ಸಮುದಾಯ ಕೇಂದ್ರದ ಆಡಳಿತಾಧಿಕಾರಿ ಡಾ|| ವೀರಾನಾಯ್ಕ, ಡಾ|| ವರಲಕ್ಷ್ಮೀ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಪ್ಪ, ಉಪಾಧ್ಯಕ್ಷರಾದ ಹುಸೇನ್ ಬೀ, ಮಾಜಿ ತಾ.ಪಂ ಅಧ್ಯಕ್ಷರಾದ ಮಹಮ್ಮದ್ ರಫಿ, ಮುಖಂಡರಾದ ಬಬ್ಬಾ ಸತ್ಯನಾರಾಯಣ, ರೆಡ್ಡಿ ನಾಗೇಶ್ವರರಾವ್, ಮಂಜು ಕಟ್ಟಿಮನಿ ಸೇರಿದಂತೆ ಲಯನ್ಸ್ ಕ್ಲಬ್ ಗಂಗಾವತಿ ಕಾರ್ಯದರ್ಶಿಯಾದ ಜಂಬಣ್ಣ ಐಲಿ, ಖಜಾಂಚಿಯಾದ ಶಿವಪ್ಪ ಗಾಳಿ ಇತರರು ಭಾಗವಹಿಸಿದ್ದರು.

ಈ ಶಿಬಿರದ ಶಂಯೋಜಕರಾದ ಲಯನ್ ಸುಬ್ರಹ್ಮಣ್ಯಶ್ವರಾವ್ ಹಾಗೂ ವೈದೇಹಿ ಆಸ್ಪತ್ರೆಯ ಮಲ್ಲಿಕಾರ್ಜುನ ಹಚ್ಚೊಳ್ಳಿ ಅವರನ್ನು ಸನ್ಮಾನಿಸಲಾಯಿತು.

ಎ.ಕೆ.ಆರ್.ಡಿ ಕಾಲೇಜಿನ ಆಡಳಿತ ಮಂಡಳಿಯವರು ವೈದ್ಯರಿಗೆ, ಶಿಬಿರಾರ್ಥಿಗಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿಸಿದ್ದರು.

 

ಡಾ|| ಶಿವಕುಮಾರ ಮಾಲಿಪಾಟೀಲ್

ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ

ಮೋ:ನA: ೯೪೪೮೩೦೨೭೭೫

WhatsApp Icon
Subscribe My YouTube