28/09/2024 9:20 AM Total Views: 40239

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ
ಅಕ್ರಮ ಮರಳು ದಂಧೆ : ರಾತ್ರಿ ಟಿಪ್ಪರ್ ಟ್ರ್ಯಾಕ್ಟರ್ ಶಬ್ಧಕ್ಕೆ ತತ್ತರಿಸಿದ ಅಕ್ಕಪಕ್ಕದ ಜನರು,
ಗಂಗಾವತಿ : ಕೊಪ್ಪಳ ರಾಯಚೂರು ರಸ್ತೆಯಲ್ಲಿ ಬರುವ ಸ್ಫೂರ್ತಿ ಹಾಸ್ಪಿಟಲ್ ಹಿಂಭಾಗದಲ್ಲಿ ಟಿಪ್ಪರ ಮುಖಾಂತರ ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು ಅಲ್ಲಿ ವಾಸಿಸುವ ಜನರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದ್ದೆ ಹಾಗು ಸ್ಫೂರ್ತಿ ಹಾಸ್ಪಿಟಲ್ ಗೆ ಬರುವ ರೋಗಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಬರಬೇಕಾಗಿದೆ ಎಂದು ಹೆಸರು ಹೇಳದ ಮಹಿಳಾ ರೋಗಿಗಳು ತಮ್ಮ ಅಳಲನ್ನು ಪಬ್ಲಿಕ್ ಪವರ್ ನ್ಯೂಸ್ ಮುಖಾಂತರ ಹೇಳಿ ಕೊಂಡಿದ್ದಾರೆ,
ಸ್ಫೂರ್ತಿ ಹಾಸ್ಪಿಟಲ್ ಪಕ್ಕದ ರಸ್ತೆಯಿಂದ ಹೋಗಿ ಸ್ಫೂರ್ತಿ ಹಾಸ್ಪಿಟಲ್ ಹಿಂಭಾಗದ ಯಾರದೋ ಖಾಲಿ ಪ್ಲಾಟಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ,
ಅಲ್ಲಿಯ ಅಕ್ಕ ಪಕ್ಕದ ಜನರು ಅಕ್ರಮ ಮರಳು ದಂಧೆಯ ವಿರುದ್ಧ ಆಕ್ರಮಕೋರರಿಗೆ ತಾಕೀತು ಮಾಡಿದರು ಏನು ಪ್ರಯೋಜನ ಆಗುತ್ತಿಲ್ಲ ಅಕ್ರಮ ಮರಳು ಸಾಗಾಣಿಕೆ ಮಾಡುವವರು ಬಲಿಷ್ಠ ಬಾಹ್ಯ ಬೆಂಬಲ ಹೊಂದಿದ್ದು ಇವರಿಗೆ ಸಕತ್ ಸಾಥ್ ನೀಡುತ್ತಿರುವುದೇ ಈ ಅಕ್ರಮಕ್ಕೆ ಕಾರಣವಾಗಿದೆ,
ಸ್ಫೂರ್ತಿ ಹಾಸ್ಪಿಟಲ್ ನ ರೋಗಿಗಳ ಪರದಾಟ
ಅಕ್ಕ ಪಕ್ಕದ ಮನೆಯ ಜನರ ಸಮಸ್ಯೆ ಒಂದು ಕಡೆ ಇದ್ದರೆ ಸ್ಫೂರ್ತಿ ಹಾಸ್ಪಿಟಲ್ ಗೆ ಬರುವ ಬಾಣಂತಿಯರು ಚಿಕ್ಕ ಮಕ್ಕಳು ಹೆಂಗಸರು ವೃದ್ಧ ರೋಗಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಬರಬೇಕಾಗುತ್ತಿದೆ ಮತ್ತು ಒಳ ರೋಗಿಗಳಿಗೆ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಶಬ್ದದಿಂದ ತುಂಬಾ ತೊಂದರೆ ಆಗುತ್ತಿದೆ ಎಂದು ಮಹಿಳಾ ರೋಗಿಯೊಬ್ಬರು ನಮ್ಮ ನ್ಯೂಸ್ ಗೇ ಮನವಿ ಮಾಡಿದ್ದಾರೆ,
ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮರಳು ಟಾಸ್ಕ್ ಫೋರ್ಸ್ ಕಮಿಟಿ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ
ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲೆಯ ಹಲವು ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಈ ಟಾಸ್ಕ್ ಫೋರ್ಸ್ ನಡಿಯಲ್ಲಿ ಬರುತ್ತಾರೆ ಆದರೆ ಯಾರು ಈ ಅಕ್ರಮ ಮರಳು ಸಾಗಣಿಕೆ ಮಾಡುವವರ ಮೇಲೆ ಕ್ರಮ ಜರುಗಿಸದೆ ಇರುವುದು ಹಾಸ್ಯಾಸ್ಪದವಾಗಿದೆ,
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಹಾಗು ಉಪವಿಭಾಗಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಜನರ ಜೀವ ಉಳಿಸ ಬೇಕಾಗಿದೆ,
