ಮಹಿಳೆಯರಿಗೆ ಮಂಗನ ಕಾಟ ಅರಣ್ಯ ಇಲಾಖೆ ಚೆಲ್ಲಾಟ…

23/07/2024 10:32 AM Total Views: 46938

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

 

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಮಹಿಳೆಯರಿಗೆ ಮಂಗನ ಕಾಟ…

ಅರಣ್ಯ ಇಲಾಖೆ ಚೆಲ್ಲಾಟ…

ಗಂಗಾವತಿ : ನಗರದ ಚಲುವಾದಿ ವಾರ್ಡ್ ನಲ್ಲಿ ಕಳೆದ ಎರಡು ತಿಂಗಳುಗಳಿಂದ ಮಹಿಳೆಯರಿಗೆ ಬಹಿರ್ದೆಸೆಗೆ ( ಶೌಚಾಲಯಕ್ಕೆ) ಹೋಗಲು ಮಂಗನ ಕಾಟವಾಗಿದ್ದು ಇದರಿಂದ ಬೇಸೆತ್ತ ಮಹಿಳೆಯರು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿರುತ್ತಾರೆ,

Advertisement Image

ಮಾಹಿತಿ ಬಂದ ಮೇಲೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಅರಣ್ಯ ಇಲಾಖೆಯ ನಡೆಗೆ ಬೇಸೆತ್ತ ಮಹಿಳೆಯರು ಲಿಖಿತ ದೂರನ್ನು ಕೊಟ್ಟಾಗ ಬೇಕೋ ಬೇಡವೋ ಎಂಬಂತೆ ತಮ್ಮ ಇಲಾಖೆಯ ಒಬ್ಬ ಕೆಳ ಮಟ್ಟದ ನೌಕರನನ್ನು ಕಳುಹಿಸಿ ಕೊಟ್ಟಿದ್ದಾರೆ,

 

ಮಂಗನ ಕಾಟ ಇರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ನೌಕರ ತಮ್ಮ  ಮೇಲಾಧಿಕಾರಿಗಳ ಗಮನಕ್ಕೂ ತಂದರು ತಾತ್ಕಾಲಿಕವಾಗಿ ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಆ ಸಮಸ್ಯೆಯನ್ನು ಆಲಿಸಿಲ್ಲಾ,

 

 

ಸಮಸ್ಯೆ ಕಣ್ಣಿಂದ ಕಂಡರು ಕುರುಡರಂತೆ ವರ್ತಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು 

ಸಮಸ್ಯೆಯನ್ನು ಕಂಡರು ಕುರುಡರಂತೆ ವರ್ತಿಸಿ ನಗರಸಭೆಗೆ ದೂರನ್ನು ರವಾನಿಸಿ ಮಂಗನನ್ನು ಹಿಡಿಯಲು ನಗರಸಭೆಯಿಂದ ಹಣ ನೀಡಿದರೆ ಮಾತ್ರ ನಾವು ಕೆಲಸ ಮಾಡುತ್ತೇವೆ ಎಂದು ಪತ್ರ ಬರೆದು ಕೈ ತೊಳೆದು ಕೊಂಡಿದ್ದಾರೆ,

 

ಮಾನ್ಯ ನ್ಯಾಯಾಲಯದ ಆದೇಶದನ್ವಯ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಕೋತಿಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕಾಗಿರುತ್ತದೆ. ಪ್ರಯುಕ್ತ, ನಗರಸಭೆ ವತಿಯಿಂದ ಸದರಿ ಕಾರ್ಯಾಚರಣೆಗೆ ಬೇಕಾಗುವ ಅನುದಾನವನ್ನು ಮೀಸಲಿಟ್ಟು ಈ ಕಛೇರಿಗೆ ಮಾಹಿತಿ ನೀಡಿದಲ್ಲಿ ಕೋತಿಗಳನ್ನು ಸೆರೆಹಿಡಿಯುವ ತಜ್ಞರು, ಬೋನ್ ಮತ್ತು ಇಲಾಖಾ ಸಿಬ್ಬಂದಿಗಳನ್ನು ಸದರಿ ಕಾರ್ಯಕ್ಕೆ ನಿಯೋಜಿಸುವುದಾಗಿ ಹೇಳಿದ್ದಾರೆ ಅಂದರೆ ಇವರ ಉದ್ದೇಶ ನಗರಸಭೆ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟು ಆ ಹಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ನಂತರ ಅರಣ್ಯ ಇಲಾಖೆಯವರು ಕೋತಿಗಳನ್ನೂ ಹಿಡಿಯುವ ಕೆಲಸ ಮಾಡುತ್ತಾರಂತೆ ಅಲ್ಲಿಯವರೆಗೆ ಕೋತಿಗಳು ಯಾರಿಗಾದರೂ ಕಚ್ಚಲಿ ಯಾರ ಮೈ ಮೇಲಾದರೂ ಎಗರಲಿ ಅವರು ಮಾತ್ರ ಸರಕಾರದ ಪಗಾರ ತಗೊಂಡು ಚೇರ್ ಮೇಲೆ ಕುಳಿತು ಆರಾಮವಾಗಿ ಇರ್ತಾರೆ ಹೀಗಿದ್ದರೆ ಜನರ ಸಮಸ್ಯೆ ಆಲಿಸುವವರು ಯಾರು..?

 

ಚುನಾಯಿತ ಪ್ರತಿನಿಧಿಗಳಾದ ಶಾಸಕರು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಸಾರ್ವಜನಿಕರ ಸೇವೆಗೆ ಬದ್ದರಲ್ಲದ ಅಧಿಕಾರಿಗಳನ್ನು ಈ ಕೂಡಲೇ ಕೆಲಸದಿಂದ ವಜಾ ಮಾಡಬೇಕೆಂದು ಚಲುವಾದಿ ವಾರ್ಡಿನ ಸಮಸ್ತ ಮಹಿಳೆಯರು ಒತ್ತಾಯಿಸಿರುತ್ತಾರೆ,

 

ಒಂದು ವೇಳೆ ಈ ಸಮಸ್ಯೆಯನ್ನು ಆಲಿಸದೆ ಇದ್ದಲ್ಲಿ ಶಾಸಕರ ಕಚೇರಿಯನ್ನು ಮುತ್ತಿಗೆ ಹಾಕುವುದಾಗಿ ಮಹಿಳೆಯರು ಎಚ್ಚರಿಕೆಯನ್ನು ಕೊಟ್ಟಿರುತ್ತಾರೆ,

 

WhatsApp Icon
Subscribe My YouTube